alex Certify ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಈ ಸ್ಯಾನಿಟೈಸರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಈ ಸ್ಯಾನಿಟೈಸರ್…!

This Hand Sanitizer Pen Will Help You Write as well as Disinfect ...

ಕೊರೋನಾ ಕಾಯಿಲೆಗೂ ಮೊದಲು ಸ್ಯಾನಿಟೈಸರ್ ನ್ನು ಕೆಲವೇ ವರ್ಗದ ಶ್ರೀಮಂತರಷ್ಟೇ ಬಳಸುತ್ತಿದ್ದರು. ಐಷಾರಾಮಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಮಾತ್ರ ಇಟ್ಟಿರಲಾಗುತ್ತಿತ್ತು.

ಈಗೀಗ ಸಾಮಾನ್ಯರೂ ಬಳಸಬೇಕಾಗಿದ್ದು, ಬಹುಬೇಡಿಕೆಯ ಮತ್ತು ಅತ್ಯವಶ್ಯಕ ವಸ್ತುವಾಗಿದೆ.‌ ಕಿಸೆಯಲ್ಲಿ ಸಣ್ಣದೊಂದು ಸ್ಯಾನಿಟೈಸರ್ ಡಬ್ಬಿ ಇಲ್ಲದೆ ಮನೆಯಿಂದ ಹೊರಗೆ ಕಾಲೇ ಇಡುವುದಿಲ್ಲ ಎನ್ನುವಂತಾಗಿದೆ.

ಪರಿಸ್ಥಿತಿ ಹೀಗಿರುವಾಗ ಕಚೇರಿಯಲ್ಲಿ ಕೆಲಸ ಮಾಡುವವರು, ಶಿಕ್ಷಕರು, ವಿದ್ಯಾರ್ಥಿಗಳು ಒಬ್ಬರ ಲೇಖನಿ ಮತ್ತೊಬ್ಬರ ಲೇಖನಿ ಬಳಸುವ ಸಾಧ್ಯತೆ ಹೆಚ್ಚಿರುತ್ತದೆ. ಎಷ್ಟೇ ಜಾಗರೂಕರಾಗಿದ್ದರೂ ಪ್ರತಿ ಬಾರಿ ಕೈ ತೊಳೆದುಕೊಳ್ಳುವುದು ಅಥವಾ ಸ್ಯಾನಿಟೈಸರ್ ಹಚ್ಚಿಕೊಳ್ಳುವುದು ಮರೆತು ಹೋಗಬಹುದು.

ಹೀಗಾಗಿ ಲಕ್ನೋದಲ್ಲಿ ಸ್ಯಾನಿಟೈಸರ್ ಲೇಖನಿ ಮಾರುಕಟ್ಟೆಗೆ ಬಂದಿದ್ದು, ಜೆಲ್ ರೂಪದ ಸ್ಯಾನಿಟೈಸರ್ ನ್ನು ಲೇಖನಿಯಲ್ಲಿ ತುಂಬಿಸಲಾಗಿರುತ್ತದೆ. ಕೈಯಲ್ಲೇ ಬರೆಯುತ್ತಲೇ ಸ್ಯಾನಿಟೈಸ್ ಮಾಡಿಕೊಳ್ಳಬಹುದು.

ಸ್ಯಾನಿಟೈಸರ್ ಲೇಖನಿ ಮಾರಾಟಗಾರ, ಮೆಡಿಶೀಲ್ಡ್ ಹೆಲ್ತ್‌ಕೇರ್ ನ ಎಂಡಿ ಫರಾಜ್ ಹಸನ್ ಹೇಳುವ ಪ್ರಕಾರ, ಮಾರುಕಟ್ಟೆಯಲ್ಲಿ ನಾನಾ ನಮೂನೆಯ ಸ್ಯಾನಿಟೈಸರ್ ಬಂದಿದೆ. 50 ಎಂಎಲ್ ನಿಂದ ಹಿಡಿದು ಲೀಟರ್ ಗಟ್ಟಲೇ ಸಂಗ್ರಹಿಸಬಲ್ಲ ಯಂತ್ರೋಪಕರಣಗಳು ಕೂಡ ಇವೆ.

ಅದರಲ್ಲಿ ಈ ಲೇಖನಿಯಲ್ಲಿನ ಸ್ಯಾನಿಟೈಸರ್ ಸಹ ಒಂದು. ಮೂರು ಗಂಟೆಗಳ ಕಾಲ ಈ ಸ್ಯಾನಿಟೈಸರ್ ಕೆಲಸ ಮಾಡುತ್ತದೆ. ಇದೇ ರೀತಿ ಕರೆನ್ಸಿ ನೋಟುಗಳನ್ನು ಶುಚಿಗೊಳಿಸಲು ಮಂಜಿನ ಮಾದರಿಯ ಸ್ಯಾನಿಟೈಸರ್ ಇದೆ. ಮನೆಯಲ್ಲಿನ ಕೋಣೆ, ಉದ್ಯಾನ ಇತ್ಯಾದಿ ಜಾಗಗಳಲ್ಲಿ ಅಳವಡಿಸಬಲ್ಲ ಫಾಗಿಂಗ್ ಮಿಶನ್ ಮಾದರಿಯ ಸ್ಯಾನಿಟೈಸರ್ ಬಂದಿದೆ ಎನ್ನುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...