alex Certify ಮಂಜುಗಡ್ಡೆಯಿಂದ ನಿರ್ಮಾಣವಾಯ್ತು ಬೃಹತ್​ ಗಾತ್ರದ ಕ್ರಿಸ್​ಮಸ್​ ಟ್ರೀ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಜುಗಡ್ಡೆಯಿಂದ ನಿರ್ಮಾಣವಾಯ್ತು ಬೃಹತ್​ ಗಾತ್ರದ ಕ್ರಿಸ್​ಮಸ್​ ಟ್ರೀ…!

ಇಂಡಿಯಾನದ ಇಂಡಿಯನಾ​ಪೋಲಿಸ್​ನಲ್ಲಿ ವಾಸವಾಗಿರುವ ಕುಟುಂಬವೊಂದು ಬಹಳ ವರ್ಷಗಳಿಂದ ಕ್ರಿಸ್​ಮಸ್​ ಹಬ್ಬವನ್ನ ವಿಶಿಷ್ಠವಾಗಿ ಆಚರಿಸಿಕೊಂಡು ಬರ್ತಾ ಇದೆ. 1961ನೇ ಇಸ್ವಿಯಿಂದ ಈ ಕುಟುಂಬ ಐಸ್​ನಿಂದ ಕ್ರಿಸ್​ಮಸ್​ ಗಿಡವನ್ನ ನಿರ್ಮಾಣ ಮಾಡುವ ಪದ್ಧತಿಯನ್ನ ರೂಢಿಸಿಕೊಂಡು ಬಂದಿದೆ.

ಈ ಐಸ್​ ಗಿಡಕ್ಕೆ ವೇಲ್ಸ್ ಐಸ್​ ಟ್ರೀ ಎಂದು ಹೆಸರಿಡಲಾಗಿದ್ದು ಇದೊಂದು ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ.
ಮರದ ಚೌಕಟ್ಟುಗಳಲ್ಲಿ ನೀರನ್ನ ಸಂಗ್ರಹಿಸಿ ಅದನ್ನ ಮರದ ಆಕಾರದಲ್ಲಿ ಜೋಡಿಸುವ ಮೂಲಕ ಈ ಕಲಾಕೃತಿಯನ್ನ ನಿರ್ಮಿಸಲಾಗಿದೆ.

ಶೀತ ವಾತಾವರಣದಲ್ಲಿ ನೀರು ಮಂಜುಗಡ್ಡೆಯಾಗಿ ಮಾರ್ಪಾಡಾಗಿರೋ ದ್ರಿಂದ ಈ ಐಸ್​ ಟ್ರೀ ನಿರ್ಮಾಣವಾಗುತ್ತೆ. ಹಾಗೂ ಈ ಐಸ್​ ಟ್ರೀಗೆ ಫುಡ್​ ಕಲರ್​ ಹಾಕುವ ಮೂಲಕ ಸಿಂಗಾರ ಮಾಡಲಾಗುತ್ತೆ.

ಮೊದಲ ಐಸ್​ ಕ್ರಿಸ್​ ಮಸ್​ ಟ್ರೀಯನ್ನ ಮಾಬೆಲ್​ ಹಾಗೂ ವೈರ್ಲ್​ ವೇಲ್​ ಎಂಬವರು ನಿರ್ಮಾಣ ಮಾಡಿದ್ದರು. 1961ರಲ್ಲಿ ಮೊದಲ ಐಸ್​ ಟ್ರೀ ನಿರ್ಮಾಣ ಮಾಡಲಾಗಿತ್ತು. ಪೊದೆಗಳ ಮೇಲೆ ನೀರು ಸಿಂಪಡಣೆ ಮಾಡುವ ಮೂಲಕ ಐಸ್​ ಟ್ರೀ ನಿರ್ಮಾಣ ಮಾಡುತ್ತಿದ್ದರು. ಎರಡನೇ ತಲೆಮಾರಿನಲ್ಲಿ ಜಾನ್​, ಜೆಫ್​ ಹಾಗೂ ಜಾನೆಟ್​ ಮತ್ತು ಮೂರನೇ ತಲೆಮಾರಿನ ವಿಂಟರ್​ ಹಾಗೂ ಚಾಡ್​​ ಐಸ್​ ಟ್ರೀ ನಿರ್ಮಾಣ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...