
ಮುಂಬೈನ ಫ್ಲೈಯಿಂಗ್ ದೋಸೆ, ಉತ್ತರ ಪ್ರದೇಶದ ಮರಳು ಆಲೂಗಡ್ಡೆಗಳು, ಗ್ವಾಲಿಯರ್‌ನ ಪರಿಸರ ಸ್ನೇಹಿ ಪೋಹಾಗಳ ಬಳಿಕ ದೆಹಲಿಯ ಸ್ಟೋರ್ ಒಂದು ತನ್ನ ವಿಶಿಷ್ಟ ಐಟಂನಿಂದ ಸುದ್ದಿಯಲ್ಲಿದೆ.
’ಶುದ್ಧ ಚಿನ್ನದ ಪಾನ್’ ಮೂಲಕ ಸುದ್ದಿ ಮಾಡುತ್ತಿರುವ ಈ ಸ್ಟೋರ್ ರಾಜಧಾನಿಯ ಕನಾಟ್ ಪ್ಲೇಸ್ ಪ್ರದೇಶದಲ್ಲಿದೆ. ಯಮು ಪಂಚಾಯತ್‌ರ ಈ ಸ್ಟೋರ್‌ನಲ್ಲಿ ಸಿಗುವ ಈ ವಿಶೇಷ ಪಾನ್‌ನ ಬೆಲೆ 600 ರೂ.ಗಳು.
24 ನಿಮಿಷದಲ್ಲಿ 50 ಕ್ಯಾಡ್ಬರಿ ಕ್ರೀಮ್ ಎಗ್ಸ್ ತಿಂದು ತೇಗಿದ ಭೂಪ
ಈ ಪಾನ್ ಒಳಗೆ ಏನೆಲ್ಲಾ ಸೇರುತ್ತವೆ ಎಂಬುದನ್ನು ವಿಡಿಯೋ ಮಾಡಿರುವ ಸ್ಟೋರ್ ಸಿಬ್ಬಂದಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಳ್ಳೇದೆಲೆ ಮೇಲೆ ಚೂನಾ, ಚಟ್ನಿ, ಖುಷ್ಬೂ, ತೆಂಗಿನ ತುರಿ, ಜೀರಿಗೆ, ಒಣ ಖರ್ಜೂರ, ಗುಲ್ಕಂದ್, ರಫೇಲೋ ಚಾಕಲೇಟ್‌ಗಳನ್ನು ಸೇರಿಸಿದ ಬಳಿಕ ಪಾನ್ ಅನ್ನು ಚಿನ್ನದ ಹಾಳೆಯಲ್ಲಿ ಸುತ್ತಿ ಗ್ರಾಹಕರಿಗೆ ನೀಡಲಾಗುತ್ತದೆ.
https://www.instagram.com/tv/CL8nFzHj3Dg/?utm_source=ig_web_copy_link