alex Certify 82ರ ಹರೆಯದಲ್ಲೂ ಭಾರ ಎತ್ತಿದ ವೃದ್ಧೆ…..ವಿಡಿಯೋ ನೋಡಿ ದಂಗಾದ ನೆಟ್ಟಿಗರು.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

82ರ ಹರೆಯದಲ್ಲೂ ಭಾರ ಎತ್ತಿದ ವೃದ್ಧೆ…..ವಿಡಿಯೋ ನೋಡಿ ದಂಗಾದ ನೆಟ್ಟಿಗರು.​..!

ವೃದ್ಧರ ಬಳಿ ವೇಟ್​ ಲಿಫ್ಟಿಂಗ್​ ಮಾಡೋಕೆ ಆಗುತ್ತಾ ಎಂದು ಕೇಳುವವರಿಗೆ 82 ವರ್ಷದ ವೃದ್ಧೆ ಹೌದು ಖಂಡಿತ ಸಾಧ್ಯ ಎಂಬ ಉತ್ತರ ನೀಡಿದ್ದಾರೆ.

ಜಿಮ್​ ಟ್ರೇನರ್​ ಆಗಿರುವ ಚಿರಾಗ್​ ಚೊರ್ಡಿಯಾ ತನ್ನ 82 ವರ್ಷದ ಅಜ್ಜಿ ವೇಟ್​ ಲಿಫ್ಟ್ ಮಾಡುತ್ತಿರುವ ಹಾಗೂ ಉಠ್‌ ಬೈಸ್ ತೆಗೆಯುತ್ತಿರುವ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ‌

ಮದುವೆಯಾದಾಗಿನಿಂದಲೂ ಒಂದಿಲ್ಲೊಂದು ದೈಹಿಕ ಚಟುವಟಿಕೆಯಲ್ಲಿ ಬ್ಯುಸಿ ಇರುವ ಅಜ್ಜಿ 82ರ ಹರೆಯದಲ್ಲೂ ತೂಕ ಎತ್ತುವ ಮೂಲಕ ನೆಟ್ಟಿಗರು ಹುಬ್ಬೇರುವಂತೆ ಮಾಡಿದ್ದಾರೆ.

ಆಕೆಯ ಮೊಣಕಾಲು ಮುರಿದಿದ್ದ ವೇಳೆ ಮೂರು ತಿಂಗಳು ನಡೆಯೋದು ಸಾಧ್ಯವಾಗಿರಲಿಲ್ಲ. ಈ ಘಟನೆ ನಡೆದ 7 ತಿಂಗಳ ಬಳಿಕ ಮತ್ತೊಮ್ಮೆ ಅಜ್ಜಿ ಆಯತಪ್ಪಿ ಬಿದ್ದಿದ್ದರು. ಈ ವೇಳೆ ಆ ಅಜ್ಜಿ ನೆಲದ ಮೇಲಿದ್ದ ವಸ್ತುವನ್ನ ಎತ್ತೋದು ಸಹ ಕಷ್ಟ ಎಂಬಂತಾಗಿತ್ತು. ತಾನು ಇನ್ನು ಬದುಕಲ್ಲ ಎಂದು ಭಾವಿಸಿದ್ದ 82 ವರ್ಷದ ಅಜ್ಜಿ, ಮೊಮ್ಮಗ ನೀಡಿದ ತರಬೇತಿಯಿಂದಾಗಿ ಇದೀಗ ಸಖತ್​ ಫಿಟ್​ & ಫೈನ್​ ಆಗಿದ್ದಾರೆ.

View this post on Instagram

A post shared by Chirag Chordia (@chordia.chirag)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...