ವೃದ್ಧರ ಬಳಿ ವೇಟ್ ಲಿಫ್ಟಿಂಗ್ ಮಾಡೋಕೆ ಆಗುತ್ತಾ ಎಂದು ಕೇಳುವವರಿಗೆ 82 ವರ್ಷದ ವೃದ್ಧೆ ಹೌದು ಖಂಡಿತ ಸಾಧ್ಯ ಎಂಬ ಉತ್ತರ ನೀಡಿದ್ದಾರೆ.
ಜಿಮ್ ಟ್ರೇನರ್ ಆಗಿರುವ ಚಿರಾಗ್ ಚೊರ್ಡಿಯಾ ತನ್ನ 82 ವರ್ಷದ ಅಜ್ಜಿ ವೇಟ್ ಲಿಫ್ಟ್ ಮಾಡುತ್ತಿರುವ ಹಾಗೂ ಉಠ್ ಬೈಸ್ ತೆಗೆಯುತ್ತಿರುವ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಮದುವೆಯಾದಾಗಿನಿಂದಲೂ ಒಂದಿಲ್ಲೊಂದು ದೈಹಿಕ ಚಟುವಟಿಕೆಯಲ್ಲಿ ಬ್ಯುಸಿ ಇರುವ ಅಜ್ಜಿ 82ರ ಹರೆಯದಲ್ಲೂ ತೂಕ ಎತ್ತುವ ಮೂಲಕ ನೆಟ್ಟಿಗರು ಹುಬ್ಬೇರುವಂತೆ ಮಾಡಿದ್ದಾರೆ.
ಆಕೆಯ ಮೊಣಕಾಲು ಮುರಿದಿದ್ದ ವೇಳೆ ಮೂರು ತಿಂಗಳು ನಡೆಯೋದು ಸಾಧ್ಯವಾಗಿರಲಿಲ್ಲ. ಈ ಘಟನೆ ನಡೆದ 7 ತಿಂಗಳ ಬಳಿಕ ಮತ್ತೊಮ್ಮೆ ಅಜ್ಜಿ ಆಯತಪ್ಪಿ ಬಿದ್ದಿದ್ದರು. ಈ ವೇಳೆ ಆ ಅಜ್ಜಿ ನೆಲದ ಮೇಲಿದ್ದ ವಸ್ತುವನ್ನ ಎತ್ತೋದು ಸಹ ಕಷ್ಟ ಎಂಬಂತಾಗಿತ್ತು. ತಾನು ಇನ್ನು ಬದುಕಲ್ಲ ಎಂದು ಭಾವಿಸಿದ್ದ 82 ವರ್ಷದ ಅಜ್ಜಿ, ಮೊಮ್ಮಗ ನೀಡಿದ ತರಬೇತಿಯಿಂದಾಗಿ ಇದೀಗ ಸಖತ್ ಫಿಟ್ & ಫೈನ್ ಆಗಿದ್ದಾರೆ.
https://www.instagram.com/p/CGARIITjsvh/?utm_source=ig_embed