ಮನೆಯಲ್ಲಿ ಬಳಕೆ ಮಾಡದೇ ಬಿಟ್ಟಿರುವ ಹಳೆಯ ಸ್ಮಾರ್ಟ್ ಫೋನ್ಗಳು ಸಾಕಷ್ಟು ಇರುತ್ವೆ . ಆದರೆ ಈ ಹಳೆಯ ಫೋನ್ಗಳು ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಸಹಾಯ ಮಾಡಬಲ್ಲುದು.
ಕೊರೊನಾ ವೈರಸ್ನಿಂದಾಗಿ ಆನ್ಲೈನ್ ಶಿಕ್ಷಣ ವ್ಯವಸ್ಥೆಗೆ ಹೆಚ್ಚು ಒತ್ತು ಸಿಕ್ಕಿರೋದ್ರಿಂದ ಬಡ ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ಹೀಗಾಗಿ ಉತ್ತರಾಖಂಡ್ನ ವ್ಯಕ್ತಿಯೊಬ್ಬರು ಬಡ ವಿದ್ಯಾರ್ಥಿನಿಯರಿಗಾಗಿ ಹಳೆಯ ಸ್ಮಾರ್ಟ್ ಫೋನ್ ಸಂಗ್ರಹ ಮಾಡೋಕೆ ಮುಂದಾಗಿದ್ದಾರೆ.
ಉತ್ತರಾಖಂಡ್ನನ ಹಲ್ದ್ವಾನಿ ನಿವಾಸಿಯಾಗಿರುವ 27 ವರ್ಷದ ಶುಭಂ ಧರ್ಮಸ್ಕ್ತು ವಿದ್ಯಾರ್ಥಿನಿಯರ ಆನ್ಲೈನ್ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ. ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿರುವ ಶುಭಂ ತಾಯಿ ಬಡ ವಿದ್ಯಾರ್ಥಿನಿಯರಿಗೆ ಮೊಬೈಲ್ ಖರೀದಿ ಮಾಡಲು ಕಷ್ಟವಾಗುತ್ತಿದೆ ಅಂತಾ ಹೇಳಿಕೊಂಡಿದ್ದರು.
ಕೆಲ ವಿದ್ಯಾರ್ಥಿನಿಯರಂತೂ ಮೊಬೈಲ್ ಖರೀದಿ ಮಾಡಲೂ ಆಗದೇ……ಇತ್ತ ಶಿಕ್ಷಣ ಪಡೆಯಲೂ ಬೇರೆ ದಾರಿಯೂ ಸಿಗದೇ ಆತ್ಮಹತ್ಯೆಗೆ ಶರಣಾಗಿದ್ದರು.
ಇದನ್ನೆಲ್ಲ ನೋಡಿದ ಶುಭಂ ತನ್ನ ಮನೆಯ ಸಮೀಪದ ವಿದ್ಯಾರ್ಥಿನಿಗೆ ಹಳೆಯ ಫೋನ್ ನೀಡಿದ್ದಾರೆ. ಇದೀಗ ಆ ವಿದ್ಯಾರ್ಥಿನಿ ಆ ಹಳೆಯ ಫೋನ್ನ್ನೇ ಬಳಸಿ ಆನ್ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಹೀಗಾಗಿ ಶುಭಂ ಹಳೆಯ ಫೋನ್ಗಳನ್ನ ಸಂಗ್ರಹಿಸಿ ಮಕ್ಕಳಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲೂ ಹಲವರು ಈ ಕಾರ್ಯದಲ್ಲಿ ತೊಡಗಿರುವುದರ ಕುರಿತಂತೆ ಈ ಹಿಂದೆ ವರದಿಯಾಗಿತ್ತು.