ಕೊರೊನಾ ವೈರಸ್ ಸಂಕಷ್ಟ ಹಾಗೂ ಲಾಕ್ಡೌನ್ ಕಾಟದಿಂದಾಗಿ ಈ ಬಾರಿ ಅನೇಕರು ತಮ್ಮ ಕೆಲಸಗಳನ್ನ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಇದೇ ರೀತಿ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬದ ರಕ್ಷಣೆಗೆ ಪಣತೊಟ್ಟ 21 ವರ್ಷದ ಯುವತಿ ತನ್ನ ತಂದೆಯ ಆಟೋವನ್ನ ಓಡಿಸುವ ಮೂಲಕ ಸುದ್ದಿಯಾಗಿದ್ದಾಳೆ.
ಜಮ್ಮು ಕಾಶ್ಮೀರದ ಉಧಾಮ್ಪುರ ಜಿಲ್ಲೆಯ ಬಂಜೀತ್ ಕೌರ್ ತಂದೆ ಸ್ಕೂಲ್ ಬಸ್ ಡ್ರೈವರ್ ಆಗಿದ್ದರು. ಆದರೆ ಆಕೆಯ ತಂದೆ ತಮ್ಮ ಕೆಲಸವನ್ನ ಕಳೆದುಕೊಂಡಿದ್ರು. ಕುಟುಂಬ ನಿರ್ವಹಣೆಗಾಗಿ ಆಕೆಯ ತಂದೆ ಆಟೋ ಓಡಿಸೋಕೆ ಪ್ರಾರಂಭಿಸಿದ್ರು. ಆದರೆ ಆಟೋ ಚಾಲಕನಾಗಿ ಸಂಪಾದನೆ ಮಾಡೋದು ತಂದೆಗೆ ಕಷ್ಟವಾಗಿದ್ದನ್ನ ಕಂಡ ಬಂಜೀತ್ ತಾವೇ ಈ ಕೆಲಸಕ್ಕೆ ಇಳಿದಿದ್ದಾರೆ.
ಆಟೋ ರಿಕ್ಷಾವನ್ನ ಓಡಿಸಿ ಮನೆಯನ್ನ ಸಾಕುತ್ತಿರುವ ಕೌರ್ ತಮ್ಮ ವ್ಯಾಸಂಗವನ್ನೂ ಅಪೂರ್ಣ ಮಾಡಿಕೊಂಡಿಲ್ಲ. ರಕ್ಷಣಾ ಇಲಾಖೆಗೆ ಸೇರಬೇಕೆಂಬ ಕನಸನ್ನ ಕಂಡಿರುವ ಕೌರ್, ಇದಕ್ಕಾಗಿ ವ್ಯಾಸಂಗವನ್ನೂ ಮಾಡುತ್ತಿದ್ದಾರೆ. ಸರ್ದಾರ್ ಗೋರಖ್ ಕೌರ್ ತಮ್ಮ ಮಗಳ ಕಾರ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸ್ತಾರೆ.