alex Certify ಕೋವಿಡ್​ 3 ನೇ ಅಲೆ ಕುರಿತು ಮಹತ್ವದ ಹೇಳಿಕೆ ನೀಡಿದ ಸಿಎಂ ಕೇಜ್ರಿವಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ 3 ನೇ ಅಲೆ ಕುರಿತು ಮಹತ್ವದ ಹೇಳಿಕೆ ನೀಡಿದ ಸಿಎಂ ಕೇಜ್ರಿವಾಲ್

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾದ ಮೂರನೇ ಅಲೆ ನಗರಾದಾದ್ಯಂತ ವ್ಯಾಪಿಸಿತ್ತಿದ್ದು ಸರ್ಕಾರ ಎಲ್ಲಾ ರೀತಿಯ ತುರ್ತು ಪರಿಸ್ಥಿತಿಗೆ ಸಿದ್ಧವಾಗಿದೆ ಅಂತಾ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ.

ಕೆಲ ಸಮಯದಿಂದ ದೆಹಲಿಯಲ್ಲಿ ಕೋವಿಡ್​ ಪ್ರಕರಣ ಏರಿಕೆ ಕಾಣುತ್ತಲೇ ಇದೆ. ಇದನ್ನ ನಾವು ಕೊರೊನಾದ ಮೂರನೇ ಅಲೆ ಅಂತಾ ಕರೆಯಬಹುದು. ಈ ಕುರಿತು ಶುಕ್ರವಾರ ಪರಿಶೀಲನಾ ಸಭೆ ಕರೆಯಲಾಗಿದೆ ಅಂತಾ ಮಾಹಿತಿ ನೀಡಿದ್ದಾರೆ.

ರೋಗಿಗಳಿಗೆ ಯಾವುದೇ ಕಾರಣಕ್ಕೂ ಬೆಡ್​ ಕೊರತೆಯಾಗದಂತೆ ನೋಡಲು ಎಲ್ಲಾ ರೀತಿಯ ಹೋರಾಟವನ್ನ ಮಾಡುತ್ತಿದ್ದೇವೆ ಅಂತಾ ಹೇಳಿದರು. ಇದೇ ವೇಳೆ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವ ವಿಚಾರವಾಗಿ ಮಾತನಾಡಿದ ಅವ್ರು ಇದಕ್ಕೆ ಅನುಮತಿ ಕೊಡಬೇಕೋ ಬೇಡ್ವೋ ಅನ್ನೋದ್ರ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಅಂತಾ ಹೇಳಿದ್ರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...