alex Certify ಬಂಧನಕ್ಕೊಳಗಾದವನಿಂದ ಠಾಣೆ ಕುರಿತು ರೇಟಿಂಗ್…!‌ ವೈರಲ್‌ ಆಯ್ತು ಪೋಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನಕ್ಕೊಳಗಾದವನಿಂದ ಠಾಣೆ ಕುರಿತು ರೇಟಿಂಗ್…!‌ ವೈರಲ್‌ ಆಯ್ತು ಪೋಸ್ಟ್

ಗೂಗಲ್ ಮ್ಯಾಪ್​​ನಲ್ಲಿ ಹೋಟೆಲ್​ ಹಾಗೂ ರೆಸ್ಟಾರೆಂಟ್​​ಗೆ ಭೇಟಿ ನೀಡಿದ ಗ್ರಾಹಕರು ತಮ್ಮ ಅನುಭವಗಳನ್ನ ಶೇರ್​ ಮಾಡಿ ರೇಟಿಂಗ್​ ನೀಡೋದನ್ನ ನೋಡಿರ್ತೇವೆ. ಆದರೆ ಪೊಲೀಸ್​ ಠಾಣೆ ಒಂದಕ್ಕೆ ಒಳ್ಳೆಯ ರೇಟಿಂಗ್​ ನೀಡಲಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡ್ತಿದೆ.

ಮಹಾರಾಷ್ಟ್ರದ ಮೀರಾ ಭಯಾಂದರ್​​ನ ನಯ ನಗರ ಪೊಲೀಸ್​ ಠಾಣೆಯೊಂದು 3.5 ಸ್ಟಾರ್​ ರೇಟಿಂಗ್​ ಹೊಂದಿರೋದು ಮಾತ್ರವಲ್ಲದೇ ಠಾಣೆಯಲ್ಲಿ ದಿನ ಕಳೆದ ಅನೇಕರು ಉತ್ತಮ ಅನುಭವವನ್ನ ಶೇರ್​ ಮಾಡಿದ್ದಾರೆ.

ನಾನು ಈ ಠಾಣೆಯಲ್ಲಿ ಬಂಧನಕ್ಕೊಳಗಾಗಿದ್ದೆ. ಆದರೆ ನನಗೆ ಇಲ್ಲಿ ಒಳ್ಳೆಯ ರೀತಿಯಲ್ಲಿ ನೋಡಿಕೊಂಡರು. ಠಾಣೆಯ ಕೊಠಡಿಗಳು ಸ್ವಚ್ಛವಾಗಿವೆ. ಅಧಿಕಾರಿಗಳು ಸಹ ದಯಾ ಗುಣವನ್ನ ಹೊಂದಿದ್ದಾರೆ. ಒಟ್ಟಾರೆಯಾಗಿ ನನಗೆ ಈ ಠಾಣೆಯಲ್ಲಿ ಒಳ್ಳೆಯ ಅನುಭವವಾಗಿದೆ. ಇನ್ನೊಮ್ಮೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಈ ಠಾಣೆಯಲ್ಲಿ ಉಳಿದುಕೊಳ್ಳಲು ಇಚ್ಚಿಸುತ್ತೇನೆ ಎಂದು ಕಮೆಂಟ್​ ಮಾಡಲಾಗಿದೆ.

5 ತಿಂಗಳ ಹಿಂದೆ ಮಾಡಲಾದ ಈ ಕಮೆಂಟ್​ನ್ನ ಐಪಿಎಸ್​ ಅಧಿಕಾರಿ ಸಂತೋಷ್​ ಸಿಂಗ್​ ಟ್ವಿಟರ್​​ನಲ್ಲಿ ಶೇರ್​ ಮಾಡಿದ್ದು ಈ ಠಾಣೆ ಇನ್ನೊಮ್ಮೆ ಬಂಧನಕ್ಕೊಳಗಾಗಬೇಕು ಅನ್ನೋವಷ್ಟರ ಮಟ್ಟಿಗೆ ಚೆನ್ನಾಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ.

— Santosh Singh (@SantoshSinghIPS) December 12, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...