ಬಂಧನಕ್ಕೊಳಗಾದವನಿಂದ ಠಾಣೆ ಕುರಿತು ರೇಟಿಂಗ್…! ವೈರಲ್ ಆಯ್ತು ಪೋಸ್ಟ್ 14-12-2020 12:42PM IST / No Comments / Posted In: Latest News, India ಗೂಗಲ್ ಮ್ಯಾಪ್ನಲ್ಲಿ ಹೋಟೆಲ್ ಹಾಗೂ ರೆಸ್ಟಾರೆಂಟ್ಗೆ ಭೇಟಿ ನೀಡಿದ ಗ್ರಾಹಕರು ತಮ್ಮ ಅನುಭವಗಳನ್ನ ಶೇರ್ ಮಾಡಿ ರೇಟಿಂಗ್ ನೀಡೋದನ್ನ ನೋಡಿರ್ತೇವೆ. ಆದರೆ ಪೊಲೀಸ್ ಠಾಣೆ ಒಂದಕ್ಕೆ ಒಳ್ಳೆಯ ರೇಟಿಂಗ್ ನೀಡಲಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡ್ತಿದೆ. ಮಹಾರಾಷ್ಟ್ರದ ಮೀರಾ ಭಯಾಂದರ್ನ ನಯ ನಗರ ಪೊಲೀಸ್ ಠಾಣೆಯೊಂದು 3.5 ಸ್ಟಾರ್ ರೇಟಿಂಗ್ ಹೊಂದಿರೋದು ಮಾತ್ರವಲ್ಲದೇ ಠಾಣೆಯಲ್ಲಿ ದಿನ ಕಳೆದ ಅನೇಕರು ಉತ್ತಮ ಅನುಭವವನ್ನ ಶೇರ್ ಮಾಡಿದ್ದಾರೆ. ನಾನು ಈ ಠಾಣೆಯಲ್ಲಿ ಬಂಧನಕ್ಕೊಳಗಾಗಿದ್ದೆ. ಆದರೆ ನನಗೆ ಇಲ್ಲಿ ಒಳ್ಳೆಯ ರೀತಿಯಲ್ಲಿ ನೋಡಿಕೊಂಡರು. ಠಾಣೆಯ ಕೊಠಡಿಗಳು ಸ್ವಚ್ಛವಾಗಿವೆ. ಅಧಿಕಾರಿಗಳು ಸಹ ದಯಾ ಗುಣವನ್ನ ಹೊಂದಿದ್ದಾರೆ. ಒಟ್ಟಾರೆಯಾಗಿ ನನಗೆ ಈ ಠಾಣೆಯಲ್ಲಿ ಒಳ್ಳೆಯ ಅನುಭವವಾಗಿದೆ. ಇನ್ನೊಮ್ಮೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಈ ಠಾಣೆಯಲ್ಲಿ ಉಳಿದುಕೊಳ್ಳಲು ಇಚ್ಚಿಸುತ್ತೇನೆ ಎಂದು ಕಮೆಂಟ್ ಮಾಡಲಾಗಿದೆ. 5 ತಿಂಗಳ ಹಿಂದೆ ಮಾಡಲಾದ ಈ ಕಮೆಂಟ್ನ್ನ ಐಪಿಎಸ್ ಅಧಿಕಾರಿ ಸಂತೋಷ್ ಸಿಂಗ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದು ಈ ಠಾಣೆ ಇನ್ನೊಮ್ಮೆ ಬಂಧನಕ್ಕೊಳಗಾಗಬೇಕು ಅನ್ನೋವಷ್ಟರ ಮಟ್ಟಿಗೆ ಚೆನ್ನಾಗಿದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. थाना इतना अच्छा कि कोई दुबारा गिरफ्तार हो कर आना चाहे 😊😲🤔 How do you assess it.#policereforms #policing@ipsvijrk @ipskabra @arunbothra @dubey_ips @arifhs1 @AwanishSharan @PriyankaJShukla @sonalgoelias @editorsunil @TheVijayKedia @ParveenKaswan @upcoprahul pic.twitter.com/eczJebXOmH — Santosh Singh (@SantoshSinghIPS) December 12, 2020