alex Certify ‘ತರಕಾರಿ’ ಸ್ವಚ್ಛ ಮಾಡಲು ವ್ಯಕ್ತಿಯಿಂದ ವಿಭಿನ್ನ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತರಕಾರಿ’ ಸ್ವಚ್ಛ ಮಾಡಲು ವ್ಯಕ್ತಿಯಿಂದ ವಿಭಿನ್ನ ವಿಧಾನ

ದೈನಂದಿನ ಕೆಲಸಗಳನ್ನು ಸರಳ ಮಾಡುವಂಥ ಐಡಿಯಾಗಳು ನಮ್ಮ ಭಾರತೀಯರಿಗೆ ಸಖತ್ತಾಗಿ ತಲೆಗೆ ಬರುತ್ತವೆ. ಇಂಥದ್ದೇ ಒಂದು ಜುಗಾಡ್‌ ಅನ್ನು ಕಂಡುಹಿಡಿದಿರುವ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಡಿದ್ದಾರೆ. ಕುಕ್ಕರ್‌ನಿಂದ ಬರುವ ಹಬೆ ಬಳಸಿ ತರಕಾರಿಗಳ ಮೇಲಿರುವ ಸೂಕ್ಷ್ಮ ಜೀವಿಗಳನ್ನು ಹೋಗಲಾಡಿಸುವ ಐಡಿಯಾ ಮಾಡಿದ್ದಾರೆ ಆ ವ್ಯಕ್ತಿ.

42 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಕುಕ್ಕರ್‌ ಮೇಲೆ ಪ್ರೆಶರ್‌ ವಿಶಲ್ ಇಡುವ ಬದಲಿಗೆ ಹಬೆ ಬರುವ ಜಾಗಕ್ಕೆ ಪೈಪ್‌ ಒಂದನ್ನು ಸಿಕ್ಕಿಸಿ, ಆ ಹಬೆಯನ್ನು ತರಕಾರಿ ಕ್ಲೀನ್ ಮಾಡಲು ಬಳಸಲಾಗಿದೆ. ಈ ಐಡಿಯಾವನ್ನು ಕಂಡ ನೆಟ್ಟಿಗರು, ’What an idea,’ ಎಂದು ಉದ್ಘಾರವೆತ್ತಿದ್ದಾರೆ.

ಆದರೆ ಇದನ್ನು ವೀಕ್ಷಿಸಿದ ಬಹಳಷ್ಟು ಮಂದಿ, ಈ ರೀತಿ ಮಾಡುವುದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಹಬೆ ಜಾಸ್ತಿಯಾಗಿ ಸಿಡಿದರೆ ಸಮೀಪದಲ್ಲಿದ್ದವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...