ದೈನಂದಿನ ಕೆಲಸಗಳನ್ನು ಸರಳ ಮಾಡುವಂಥ ಐಡಿಯಾಗಳು ನಮ್ಮ ಭಾರತೀಯರಿಗೆ ಸಖತ್ತಾಗಿ ತಲೆಗೆ ಬರುತ್ತವೆ. ಇಂಥದ್ದೇ ಒಂದು ಜುಗಾಡ್ ಅನ್ನು ಕಂಡುಹಿಡಿದಿರುವ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಶೇರ್ ಮಾಡಿಕೊಂಡಿದ್ದಾರೆ. ಕುಕ್ಕರ್‌ನಿಂದ ಬರುವ ಹಬೆ ಬಳಸಿ ತರಕಾರಿಗಳ ಮೇಲಿರುವ ಸೂಕ್ಷ್ಮ ಜೀವಿಗಳನ್ನು ಹೋಗಲಾಡಿಸುವ ಐಡಿಯಾ ಮಾಡಿದ್ದಾರೆ ಆ ವ್ಯಕ್ತಿ.
42 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಕುಕ್ಕರ್ ಮೇಲೆ ಪ್ರೆಶರ್ ವಿಶಲ್ ಇಡುವ ಬದಲಿಗೆ ಹಬೆ ಬರುವ ಜಾಗಕ್ಕೆ ಪೈಪ್ ಒಂದನ್ನು ಸಿಕ್ಕಿಸಿ, ಆ ಹಬೆಯನ್ನು ತರಕಾರಿ ಕ್ಲೀನ್ ಮಾಡಲು ಬಳಸಲಾಗಿದೆ. ಈ ಐಡಿಯಾವನ್ನು ಕಂಡ ನೆಟ್ಟಿಗರು, ’What an idea,’ ಎಂದು ಉದ್ಘಾರವೆತ್ತಿದ್ದಾರೆ.
ಆದರೆ ಇದನ್ನು ವೀಕ್ಷಿಸಿದ ಬಹಳಷ್ಟು ಮಂದಿ, ಈ ರೀತಿ ಮಾಡುವುದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದೊಮ್ಮೆ ಹಬೆ ಜಾಸ್ತಿಯಾಗಿ ಸಿಡಿದರೆ ಸಮೀಪದಲ್ಲಿದ್ದವರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದ್ದಾರೆ.