ಅದು ಹುಲಿಯೇ ಆದರೂ ಮರಗಳ ಮೇಲೆ ಕೂತಿರುವ ಕೋತಿಗಳು ಮಾಡುವ ಚೇಷ್ಟೆಯನ್ನು ಸಹಿಸಿಕೊಳ್ಳಬೇಕು. ಹಾಗೇ ನೀರಿನಲ್ಲಿ ತನಗಿಂತ ಚೆನ್ನಾಗಿ ಈಜಬಲ್ಲ ಪ್ರಾಣಿಗಳು ಏನಾದ್ರೂ ಕಾಟ ಕೊಟ್ಟರೆ..?
ಇಂಥದ್ದೇ ಒಂದು ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾತುಕೋಳಿಯೊಂದನ್ನು ಹಿಡಿಯಲೆಂದು ಹೊಂಚು ಹಾಕಿಕೊಂಡು, ಹೇಗೆ ನೆಗೆಯಬೇಕು ಎಂದೆಲ್ಲಾ ಲೆಕ್ಕಾಚಾರ ಹಾಕುವ ಹುಲಿಗೆ, ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಇನ್ನೆಲ್ಲೋ ಎದ್ದೇಳುವ ಬಾತುಕೋಳಿ ಸರಿಯಾಗಿ ನೀರು ಕುಡಿಸಿಬಿಡುತ್ತದೆ.
ಎರಡು ವರ್ಷಗಳ ಹಿಂದಿನ ಕ್ಲಿಪ್ ಆದರೂ ಸಹ ಇದೀಗ ಮತ್ತೊಮ್ಮೆ ಈ ವಿಡಿಯೋ ವೈರಲ್ ಆಗಿದೆ.
https://twitter.com/buitengebieden_/status/1288236951645097986?ref_src=twsrc%5Etfw%7Ctwcamp%5Etweetembed%7Ctwterm%5E1288236951645097986%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fthe-great-escape-duck-outsmarts-preying-tiger-by-diving-underwater-hilarious-moment-goes-viral-watch%2F629127