alex Certify ಈ ಅಪರೂಪದ ದೇವಿ ವಿಗ್ರಹದ ಕತೆ ಕೇಳಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಅಪರೂಪದ ದೇವಿ ವಿಗ್ರಹದ ಕತೆ ಕೇಳಿದ್ದೀರಾ…?

ನವರಾತ್ರಿ ಹಬ್ಬದ ಸಮಯದಲ್ಲಿ ಪ್ರತಿಷ್ಟಾಪನೆಗೊಂಡ ದೇವಿಯ ಮೂರ್ತಿಯನ್ನ ದಶಮಿಯ ದಿನದಂದೇ ಹೆಚ್ಚಾಗಿ ವಿಸರ್ಜನೆ ಮಾಡ್ತಾರೆ.

ಆದರೆ ವಾರಣಾಸಿಯಲ್ಲಿ ಮಾತ್ರ ದೇವಿಯ ವಿಗ್ರಹವೊಂದು ಕಳೆದ ಅನೇಕ ವರ್ಷಗಳಿಂದ ವಿಸರ್ಜನೆಯೇ ಆಗದೇ ಆಶ್ಚರ್ಯಕ್ಕೆ ಕಾರಣವಾಗಿದೆ .

ಈ ವಿಗ್ರಹ ಜೇಡಿ ಮಣ್ಣಿನಿಂದ ನಿರ್ಮಾಣವಾಗಿರೋದ್ರಿಂದ ಬಹುಶಃ ಇದು ಇಷ್ಟೊಂದು ಗಟ್ಟಿಯಾಗಿ ಇರಬಹುದು ಅಂತಾ ಸ್ಥಳೀಯರು ಅಂದಾಜಿಸಿದ್ದಾರೆ.

ದುರ್ಗಾ ಬದಿ ಎಂಬಲ್ಲಿ ಬಂಗಾಳಿ ಮೂಲದ ಕುಟುಂಬವೊಂದು ಈ ದೇವಿಯ ವಿಗ್ರಹವನ್ನ ನಿರ್ಮಾಣ ಮಾಡಿತ್ತು. ಈ ವಿಗ್ರಹವನ್ನ ನವರಾತ್ರಿಯ 6ನೇ ದಿನದಂದು ಪ್ರತಿಷ್ಟಾಪನೆ ಮಾಡಲಾಗಿತ್ತು. ಆದರೆ ದಸರಾ ದಿನದಂದು ವಿಸರ್ಜನೆ ಮಾಡಬೇಕು ಅಂತಾ ಮುಂದಾದ ಸ್ಥಳೀಯರಿಗೆ ಈ ದೇವಿ ವಿಗ್ರಹ ಶಾಕ್ ನೀಡಿದೆ. ಸ್ಥಳೀಯರ ಸಾಕಷ್ಟು ಪ್ರಯತ್ನದ ಬಳಿಕವೂ ದೇವಿ ವಿಗ್ರಹವನ್ನ ಒಂದಿಂಚೂ ಕದಲಿಸಲು ಆಗದೇ ಸೋತಿದ್ದಾರೆ.

ಈ ವಿಗ್ರಹ ತುಂಬಾ ಹಳೆಯ ಕಾಲದ್ದಾಗಿದ್ರೂ ಸಹ ಈಗಲೂ ಹೊಸ ವಿಗ್ರಹದಂತೆ ಹೊಳೆಯುತ್ತಿದೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ಈ ವಿಗ್ರಹಕ್ಕೆ ಬಣ್ಣ ಹಚ್ಚ ಲಾಗುತ್ತೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಬಂಗಾಳಿ ಕುಟುಂಬದ ಹೇಮಂತ್, ನನ್ನ ಪೂರ್ವಜರ ಕನಸಿನಲ್ಲಿ ದೇವಿ ಬಂದು ತಾನು ಎಲ್ಲಿಯೂ ಹೋಗಲ್ಲ. ಇಲ್ಲೇ ಇರುತ್ತೇನೆ ಎಂದು ಹೇಳಿದ್ದಳು ಅಂತಾ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...