alex Certify ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಶೇರ್ ಮಾಡಿರುವ ಈ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಶೇರ್ ಮಾಡಿರುವ ಈ ವಿಡಿಯೋ..!

ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಾಗ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫನ್ನಿ ವಿಡಿಯೋಗಳನ್ನ ಶೇರ್​ ಮಾಡುತ್ತಾ ಇರ್ತಾರೆ.

ಇದೀಗ ಇಂತಹದ್ದೇ ಮತ್ತೊಂದು ವಿಡಿಯೋವನ್ನ ಸ್ಮೃತಿ ಇರಾನಿ ಶೇರ್​ ಮಾಡಿದ್ದು ನೆಟ್ಟಿಗರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ವಿಡಿಯೋದಲ್ಲಿ ಸ್ಪೀಡಾಗಿ ಹೋಗುತ್ತಿದ್ದ ಸ್ಕೂಟಿಯನ್ನ ಪೊಲೀಸ್​ ಅಡ್ಡ ಹಾಕುತ್ತಾರೆ. ಪೊಲೀಸ್​ ಹಾಗೂ ಸ್ಕೂಟಿ ಸವಾರನ ನಡುವೆ ನಡೆಯುವ ಸಂಭಾಷಣೆ ಸಖತ್​ ಫನ್ನಿಯಾಗಿದೆ.

ವೇಗವಾಗಿ ಸ್ಕೂಟಿಯನ್ನ ತೆಗೆದುಕೊಂಡು ಹೋದ ಸವಾರನನ್ನ ನಿಲ್ಲಿಸಿದ ಪೊಲೀಸ್​ ಆತನ ಬಳಿ ವಾಹನ ಪರವಾನಗಿಯನ್ನ ತೋರಿಸುವಂತೆ ಹೇಳುತ್ತಾರೆ. ಬಳಿಕ ಆರ್​ಸಿ, ಇದಾದ ಬಳಿಕ ಇನ್ಶೂರೆನ್ಸ್​, ಹಾಲ್​ ಟಿಕೆಟ್, ಪಾನ್​ ಕಾರ್ಡ್​, ಎಲೆಕ್ಟ್ರಿಸಿಟಿ ಬಿಲ್​​​ ಹೀಗೆ ಒಂದಾದ ಮೇಲೆ ಒಂದರಂತೆ ಕೇಳುತ್ತಲೇ ಹೋಗ್ತಾರೆ.

ಪೊಲೀಸ್​ ಕೇಳಿದ ಎಲ್ಲಾ ದಾಖಲೆಯನ್ನ ಸ್ಕೂಟಿ ಸವಾರ ನೀಡುತ್ತಾನೆ. ಎಲ್ಲಾ ದಾಖಲೆಯನ್ನ ಹೊಂದಿದ ಬಳಿಕವೂ ನೀನ್ಯಾಕೆ ನನ್ನ ಕೈಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ ಎಂದು ಪೊಲೀಸ್​ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೈಕ್​ ಸವಾರ ಚಾರ್ಜರ್​ ಮನೆಯಲ್ಲೇ ಬಿಟ್ಟು ಬಂದಿದ್ದೆ. ಮೊಬೈಲ್​ನಲ್ಲಿ ಚಾರ್ಜ್​ ಇರಲಿಲ್ಲ ಎಂದು ಉತ್ತರ ನೀಡುತ್ತಾನೆ.

ನಿಮ್ಮ ಮೊಬೈಲ್​ನಲ್ಲೂ ಚಾರ್ಜ್​ ಖಾಲಿಯಾಗಿದ್ದರೆ ಈ ವಿಡಿಯೋವನ್ನ ನೀವೂ ಹೋಲಿಕೆ ಮಾಡಿಕೊಳ್ಳಬಹುದು. ಸ್ಮೃತಿ ಇರಾನಿ ಶೇರ್​ ಮಾಡಿರುವ ಈ ವಿಡಿಯೋ ಸಿಕ್ಕಾಪಟ್ಟೆ ಲೈಕ್ಸ್​ ಸಂಪಾದಿಸಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...