ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಗಾಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫನ್ನಿ ವಿಡಿಯೋಗಳನ್ನ ಶೇರ್ ಮಾಡುತ್ತಾ ಇರ್ತಾರೆ.
ಇದೀಗ ಇಂತಹದ್ದೇ ಮತ್ತೊಂದು ವಿಡಿಯೋವನ್ನ ಸ್ಮೃತಿ ಇರಾನಿ ಶೇರ್ ಮಾಡಿದ್ದು ನೆಟ್ಟಿಗರು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.
ವಿಡಿಯೋದಲ್ಲಿ ಸ್ಪೀಡಾಗಿ ಹೋಗುತ್ತಿದ್ದ ಸ್ಕೂಟಿಯನ್ನ ಪೊಲೀಸ್ ಅಡ್ಡ ಹಾಕುತ್ತಾರೆ. ಪೊಲೀಸ್ ಹಾಗೂ ಸ್ಕೂಟಿ ಸವಾರನ ನಡುವೆ ನಡೆಯುವ ಸಂಭಾಷಣೆ ಸಖತ್ ಫನ್ನಿಯಾಗಿದೆ.
ವೇಗವಾಗಿ ಸ್ಕೂಟಿಯನ್ನ ತೆಗೆದುಕೊಂಡು ಹೋದ ಸವಾರನನ್ನ ನಿಲ್ಲಿಸಿದ ಪೊಲೀಸ್ ಆತನ ಬಳಿ ವಾಹನ ಪರವಾನಗಿಯನ್ನ ತೋರಿಸುವಂತೆ ಹೇಳುತ್ತಾರೆ. ಬಳಿಕ ಆರ್ಸಿ, ಇದಾದ ಬಳಿಕ ಇನ್ಶೂರೆನ್ಸ್, ಹಾಲ್ ಟಿಕೆಟ್, ಪಾನ್ ಕಾರ್ಡ್, ಎಲೆಕ್ಟ್ರಿಸಿಟಿ ಬಿಲ್ ಹೀಗೆ ಒಂದಾದ ಮೇಲೆ ಒಂದರಂತೆ ಕೇಳುತ್ತಲೇ ಹೋಗ್ತಾರೆ.
ಪೊಲೀಸ್ ಕೇಳಿದ ಎಲ್ಲಾ ದಾಖಲೆಯನ್ನ ಸ್ಕೂಟಿ ಸವಾರ ನೀಡುತ್ತಾನೆ. ಎಲ್ಲಾ ದಾಖಲೆಯನ್ನ ಹೊಂದಿದ ಬಳಿಕವೂ ನೀನ್ಯಾಕೆ ನನ್ನ ಕೈಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ ಎಂದು ಪೊಲೀಸ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೈಕ್ ಸವಾರ ಚಾರ್ಜರ್ ಮನೆಯಲ್ಲೇ ಬಿಟ್ಟು ಬಂದಿದ್ದೆ. ಮೊಬೈಲ್ನಲ್ಲಿ ಚಾರ್ಜ್ ಇರಲಿಲ್ಲ ಎಂದು ಉತ್ತರ ನೀಡುತ್ತಾನೆ.
ನಿಮ್ಮ ಮೊಬೈಲ್ನಲ್ಲೂ ಚಾರ್ಜ್ ಖಾಲಿಯಾಗಿದ್ದರೆ ಈ ವಿಡಿಯೋವನ್ನ ನೀವೂ ಹೋಲಿಕೆ ಮಾಡಿಕೊಳ್ಳಬಹುದು. ಸ್ಮೃತಿ ಇರಾನಿ ಶೇರ್ ಮಾಡಿರುವ ಈ ವಿಡಿಯೋ ಸಿಕ್ಕಾಪಟ್ಟೆ ಲೈಕ್ಸ್ ಸಂಪಾದಿಸಿದೆ.
https://www.instagram.com/p/CNWW6GkHgq_/?utm_source=ig_web_copy_link