
ದೇವರ ಪೂಜೆಗೆಂದು ತಂದ ಹಾಲನ್ನು ಬೀದಿ ನಾಯಿಗಳಿಗೆ ಕೊಡುವ ಮೂಲಕ ದೇವಸ್ಥಾನದ ಸಿಬ್ಬಂದಿ ಹಲವರ ಹೃದಯ ಗೆದ್ದಿದ್ದಾರೆ.
ಅನಿಮಲ್ ಮ್ಯಾಟರ್ ಟು ಮಿ, ಮುಂಬೈ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಜನಮನ ಸೆಳೆದಿದೆ.
ದೊಡ್ಡ ಟ್ರೇ ಒಳಗೆ ಹಾಲನ್ನು ಸುರಿಯಲಾಗುತ್ತಿದ್ದು, ಅದರ ಸುತ್ತ ಬೀದಿ ನಾಯಿಗಳು ನಿಂತು ಹಾಲು ಕುಡಿಯುತ್ತಿವೆ. ಈ ವಿಡಿಯೋವನ್ನು 52 ಸಾವಿರ ಮಂದಿ ನೋಡಿದ್ದು, 5 ಸಾವಿರ ಜನರು ಮೆಚ್ಚಿಕೊಂಡಿದ್ದಾರೆ.
ಎಲ್ಲ ದೇವಸ್ಥಾನಗಳಲ್ಲೂ ಈ ಪದ್ಧತಿ ಕಡ್ಡಾಯ ಮಾಡಬೇಕು, ಬೀದಿ ನಾಯಿಗಳು ಕೂಡ ಹಸಿವಿನಿಂದ ಸಾಯಬಾರದು, ಹಾಲನ್ನು ವ್ಯರ್ಥ ಮಾಡಬಾರದು ಎಂಬಿತ್ಯಾದಿ ಸಲಹೆಗಳು ಕಮೆಂಟ್ ಬಾಕ್ಸ್ ತುಂಬಿವೆ.
https://www.facebook.com/amtmindia/videos/941050486374693