ಮಹಾರಾಷ್ಟ್ರ ರಾಜ್ಯದ ಪುಣೆಯ 22 ವರ್ಷದ ಇಂಜಿನಿಯರ್ ರಾಜ್ ದಾಗ್ವಾರ್ ಜನರ ಮನದ ಮಾತನ್ನ ಕೇಳೋಕೆ ಮುಂದಾಗಿದ್ದಾರೆ. ಫರ್ಗುಸನ್ ಕಾಲೇಜು ರಸ್ತೆಯ ಮುಂದೆ ನಿಮ್ಮ ಕತೆಯನ್ನ ಹೇಳಿ ನಾನು ನಿಮಗೆ 10 ರೂಪಾಯಿ ಕೊಡುತ್ತೇನೆ ಎಂಬ ಬೋರ್ಡ್ ಹಿಡಿದು ನಿಂತಿದ್ದಾರೆ.
ಜನರ ಕತೆಯನ್ನ ಕೇಳಬೇಕು ಎಂಬ ಕಾರಣಕ್ಕೆ ರಾಜ್ ನಿತ್ಯ ಕನಿಷ್ಟ 5 ಗಂಟೆ ಸಮಯವನ್ನ ಫುಟ್ಪಾತ್ನಲ್ಲೇ ಕಳೆಯುತ್ತಾರೆ. ಅವರಿಗೆ ಈವರೆಗೆ ಕತೆ ಹೇಳಿದ ಪ್ರತಿಯೊಬ್ಬರ ಹೆಸರನ್ನೂ ರಾಜ್ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.
ನಾನು ಉತ್ತಮ ಕೇಳುಗನಾಗಿದ್ದೇನೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಮಸ್ಯೆಗಳಿವೆ. ಲಾಕ್ಡೌನ್ನಿಂದಾಗಿ ಅನೇಕರು ಒಂಟಿತನವನ್ನ ಅನುಭವಿಸುತ್ತಿದ್ದಾರೆ. ಅನೇಕರಿಗೆ ತಮ್ಮ ಭಾವನೆಯನ್ನ ಹೊರಗೆ ಹಾಕಿಕೊಳ್ಳಲು ಯಾರೂ ಸಿಗ್ತಿಲ್ಲ. ಇದರಿಂದ ಖಿನ್ನತೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ನಾನು ಈ ಪ್ರಯತ್ನಕ್ಕೆ ಮುಂದಾಗಿದ್ದೇನೆ ಎಂದು ರಾಜ್ ಹೇಳಿದ್ರು.