alex Certify ʼಆಯುಷ್ಮಾನ್​ ಭಾರತ್ʼ ಯೋಜನೆ ವಿಚಾರದಲ್ಲಿ ತೆಲಂಗಾಣ ಸಿಎಂ ಯು ಟರ್ನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಯುಷ್ಮಾನ್​ ಭಾರತ್ʼ ಯೋಜನೆ ವಿಚಾರದಲ್ಲಿ ತೆಲಂಗಾಣ ಸಿಎಂ ಯು ಟರ್ನ್

ತೆಲಂಗಾಣ ಸರ್ಕಾರದ ಆರೋಗ್ಯ ಯೋಜನೆಯನ್ನ ಆಯುಷ್ಮಾನ್​ ಭಾರತ್​ ಜೊತೆ ವಿಲೀನ ಮಾಡುವ ನಿರ್ಧಾರದಿಂದ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಮತ್ತೊಮ್ಮೆ ಯೂ ಟರ್ನ್ ಹೊಡೆದಿದ್ದಾರೆ.

ಪ್ರಧಾನಿ ಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಎಲ್ಲಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆಗಿನ ಸಭೆಯಲ್ಲಿ ಪ್ರಧಾನಿಗೆ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್​ ನಿರ್ಧಾರದ ಬಗ್ಗೆ ಸೋಮೇಶ್​ ಕುಮಾರ್​ ಮಾಹಿತಿ ನೀಡಿದ್ರು.

ಸೆಪ್ಟೆಂಬರ್​ 2018ರಲ್ಲಿ ಕೇಂದ್ರ ಸರ್ಕಾರ ಆಯುಷ್ಮಾನ್​ ಭಾರತ್​ ಯೋಜನೆಯನ್ನ ಜಾರಿಗೆ ತಂದಾಗ ಅದನ್ನ ನಿರಾಕರಿಸಿದ ರಾಜ್ಯಗಳಲ್ಲಿ ತೆಲಂಗಾಣ ಕೂಡ ಒಂದಾಗಿತ್ತು. ಓಡಿಶಾ, ದೆಹಲಿ, ಕೇರಳ, ಪಂಜಾಬ್​ ಜೊತೆಗೆ ತೆಲಂಗಾಣ ಕೂಡ ನಮ್ಮ ರಾಜ್ಯದಲ್ಲೇ ಒಳ್ಳೆಯ ಆರೋಗ್ಯ ಯೋಜನೆ ಇದೆ ಎಂದು ಹೇಳುವ ಮೂಲಕ ಆಯುಷ್ಮಾನ್​ ಭಾರತವನ್ನ ನಿರಾಕರಿಸಿತ್ತು.

ಕೇಂದ್ರ ಸರ್ಕಾರದ ಆಯುಷ್ಮಾನ್​ ಭಾರತ್​ ಕೇವಲ 80 ಲಕ್ಷ ಮಂದಿಗೆ ಮಾತ್ರ ಫಲ ನೀಡಿದ್ರೆ ತೆಲಂಗಾಣದ ಆರೋಗ್ಯ ಶ್ರೀ ರಾಜ್ಯದ ಜನಸಂಖ್ಯೆಯ 70 ಪ್ರತಿಶತ ಮಂದಿಗೆ ಆಸರೆಯಾಗಿದೆ ಎಂದು ಹೇಳಿತ್ತು.

ಆದರೆ ಆರೋಗ್ಯ ಶ್ರೀ ಜೊತೆಗೆ ಆಯುಷ್ಮಾನ್​ ಭಾರತವನ್ನೂ ಸೇರಿಸೋಕೆ ಮುಂದಾಗಿದ್ದ ಕೆಸಿಆರ್ ಇದೀಗ ಮತ್ತೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಕೃಷಿ ಮಸೂದೆ ವಿಚಾರದಲ್ಲೂ ಮೊದಲು ರೈತರ ಪರ ನಿಂತಿದ್ದ ಕೆಸಿಆರ್​ ಬಳಿಕ ಕೇಂದ್ರ ಸರ್ಕಾರಕ್ಕೆಸಾಥ್​ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...