alex Certify ಕ್ರಿಕೆಟ್​ ಬೆಟ್ಟಿಂಗ್​ ಗಾಗಿ ತಾಯಿ – ಸಹೋದರಿಯನ್ನೇ ಕೊಂದ ಪಾಪಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್​ ಬೆಟ್ಟಿಂಗ್​ ಗಾಗಿ ತಾಯಿ – ಸಹೋದರಿಯನ್ನೇ ಕೊಂದ ಪಾಪಿ…!

ಕ್ರಿಕೆಟ್​ ಬೆಟ್ಟಿಂಗ್​ ದಂಧೆಯಲ್ಲಿ 20 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದ 23 ವರ್ಷದ ಎಂಟೆಕ್​​ ವಿದ್ಯಾರ್ಥಿ ಕುಟುಂಬದ ಆಸ್ತಿಯನ್ನ ಮಾರಾಟ ಮಾಡಬೇಕು ಎಂದು ತಾಯಿ ಹಾಗೂ ಸಹೋದರಿಯನ್ನ ಕೊಂದ ಘಟನೆ ಹೈದರಾಬಾದ್​​ನ ಮೆಡ್ಚಲ್​​ನಲ್ಲಿ ನಡೆದಿದೆ.

ಪೊಲೀಸರು ಆರೋಪಿ ಪಿ. ಸೈನಾಥ್​ ರೆಡ್ಡಿಯನ್ನ ಬಂಧಿಸಿದ್ದಾರೆ.

ಮೃತ ತಾಯಿಯನ್ನ ಪಿ. ಸುನಿತಾ(44) ಹಾಗೂ ಪುತ್ರಿಯನ್ನ ಪಿ. ಅನುಜಾ ರೆಡ್ಡಿ(22) ಎಂದು ಗುರುತಿಸಲಾಗಿದೆ. ಈತ ಕೀಟನಾಶಕವನ್ನ ನೀಡಿ ತಾಯಿ ಹಾಗೂ ಸಹೋದರಿಯನ್ನ ಕೊಂದಿದ್ದಾನೆ ಎನ್ನಲಾಗಿದೆ. ಮೂರು ವರ್ಷಗಳ ಹಿಂದೆ ಸೈನಾಥ್​ ತಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ತಂದೆಯ 20 ಲಕ್ಷ ರೂಪಾಯಿ ಉಳಿತಾಯ ಹಾಗೂ ವಿಮಾ ಹಣವನ್ನ ಸುನೀತಾ ಖಾತೆಯಲ್ಲಿ ಜಮಾ ಮಾಡಿಡಲಾಗಿತ್ತು. ಆದರೆ ಐಶಾರಾಮಿ ಜೀವನ ಮಾಡುವ ಆಸೆಯಲ್ಲಿದ್ದ ಸೈನಾಥ್​ ಕ್ರಿಕೆಟ್​ ಬೆಟ್ಟಿಂಗ್​ ದಂಧೆಗೆ ಇಳಿದಿದ್ದ.

ಸುನೀತಾ ಬ್ಯಾಂಕ್​ ಖಾತೆಗೆ ಸೈನಾಥ್​ ಮೊಬೈಲ್​ ಸಂಖ್ಯೆಯನ್ನ ಲಿಂಕ್​ ಮಾಡಲಾಗಿತ್ತು. ಕ್ರಿಕೆಟ್​ ಬೆಟ್ಟಿಂಗ್​ ದಂಧೆಗಾಗಿ ಸೈನಾಥ್​ ತಾಯಿಯ ಖಾತೆಯಲ್ಲಿದ್ದ 20 ಲಕ್ಷ ರೂಪಾಯಿ ಹಾಗೂ ಸುನೀತಾಳ 15 ತೊಲೆ ಚಿನ್ನವನ್ನ ಮಾರಾಟ ಮಾಡಿದ್ದ. ಇದು ಮಾತ್ರವಲ್ಲದೇ ಸಾಲ ನೀಡುವ ಆನ್​ಲೈನ್​ ಅಪ್ಲಿಕೇಶನ್​ ಹಾಗೂ ವೆಬ್​ಸೈಟ್​ಗಳಿಂದಲೂ ಲಕ್ಷಗಟ್ಟಲೇ ಸಾಲ ಮಾಡಿದ್ದ.

ಹೀಗಾಗಿ ಈ ಎಲ್ಲ ಸಾಲದ ಸುಳಿಯಿಂದ ಪಾರಾಗಲು ನಿರ್ಧರಿಸಿದ ಸೈನಾಥ್​ ತಾಯಿ ಹಾಗೂ ಸಹೋದರಿಯನ್ನ ಕೊಂದು ಕುಟುಂಬದ ಆಸ್ತಿಯನ್ನ ಮಾರಾಟ ಮಾಡೋಕೆ ಮುಂದಾಗಿದ್ದ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...