alex Certify ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್​ ತಯಾರಿಸಿದ ವಿದ್ಯಾರ್ಥಿನಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್​ ತಯಾರಿಸಿದ ವಿದ್ಯಾರ್ಥಿನಿಯರು

ಪರಿಸರ ಮಾಲಿನ್ಯವನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಶಾಲಾ ವಿದ್ಯಾರ್ಥಿನಿಯರು ನೈಸರ್ಗಿಕ ವಸ್ತುಗಳನ್ನ ಬಳಸಿ ಸ್ಯಾನಿಟರಿ ಪ್ಯಾಡ್​ಗಳನ್ನ ತಯಾರಿಸಿದ್ದಾರೆ. ಶೂನ್ಯ ತ್ಯಾಜ್ಯದ ಈ ಸ್ಯಾನಿಟರಿ ಪ್ಯಾಡ್​ಗಳಿಗೆ ವಿದ್ಯಾರ್ಥಿನಿಯರು ಸ್ತ್ರೀ ರಕ್ಷಾ ಪ್ಯಾಡ್ಸ್ ಎಂದು ನಾಮಕರಣ ಮಾಡಿದ್ದಾರೆ.

ಜಿಲ್ಲಾ ಪರಿಷದ್​ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮೆಂತೆ, ಸಬ್ಜಾ ಬೀಜ, ಅರಿಶಿಣ ಹಾಗೂ ಬೇವಿನ ಎಲೆಯನ್ನ ಬಳಸಿ ಈ ಆರ್ಗಾನಿಕ್​ ಸ್ಯಾನಿಟರಿ ಪ್ಯಾಡ್​ಗಳನ್ನ ತಯಾರಿಸಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಡ್​ಗಳು ಅಷ್ಟೊಂದು ಸುಲಭವಾಗಿ ಕರಗುವ ಸಾಮರ್ಥ್ಯ ಹೊಂದಿಲ್ಲ. ಈ ಸಮಸ್ಯೆಗೆ ಪರಿಹಾರವನ್ನ ಹುಡುಕಬೇಕು ಅಂತಾ ನಾವು ಆರ್ಗಾನಿಕ್​ ವಸ್ತುಗಳನ್ನ ಬಳಸಿ ಈ ಆವಿಷ್ಕಾರ ಮಾಡಿದ್ದೇವೆ ಅಂತಾ ವಿದ್ಯಾರ್ಥಿನಿಯರು ಹೇಳಿದ್ದಾರೆ. ಇದು ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟರಿ ಪ್ಯಾಡ್​ಗಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನ ಬಳಕೆ ಮಾಡಲಾಗ್ತಿದ್ದು ಇದರಿಂದ ಮಹಿಳೆಯರ ಆರೋಗ್ಯಕ್ಕೂ ಹಾಗೂ ಪರಿಸರಕ್ಕೂ ಹಾನಿ ಉಂಟಾಗುತ್ತೆ ಅಂತಾ ಮಾಹಿತಿ ನೀಡಿದ್ರು.

ಬೇವಿನ ಎಲೆಗಳು, ಮೆಂತ್ಯೆ ಹಾಗೂ ಅರಿಶಿಣವನ್ನ ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಬಳಿಕ ಅದು ಸ್ಯಾನಿಟರಿ ಪ್ಯಾಡ್​ಗಳ ರೀತಿಯಲ್ಲಿ ಗಟ್ಟಿಯಾಗುವವರೆಗೂ ಒಣಗಿಸಿ ಬಳಿಕ ಅದನ್ನ ಪ್ಯಾಡ್​​ ಗಾತ್ರಕ್ಕೆ ಕತ್ತರಿಸಲಾಗುತ್ತೆ. ಇದಾದ ಬಳಿಕ ಈ ಪ್ಯಾಡ್​ಗೆ ಮೆಂತ್ಯೆ ಹಾಗೂ ಸಬ್ಜಾ ಬೀಜಗಳನ್ನ ಜೇನುಮೇಣದಿಂದ ತಯಾರಿಸಿದ ಅಂಟನ್ನ ಹಾಕಲಾಗುತ್ತೆ. ಇವುಗಳ ಒಳಗೆ ಹತ್ತಿಯನ್ನ ಇಟ್ಟು ಸೀಲ್​ ಮಾಡಲಾಗುತ್ತೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

— ANI (@ANI) January 4, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...