![](https://kannadadunia.com/wp-content/uploads/2021/01/wmq6be8gylms0lgb_1609833258-1024x585.jpeg)
ಜಿಲ್ಲಾ ಪರಿಷದ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮೆಂತೆ, ಸಬ್ಜಾ ಬೀಜ, ಅರಿಶಿಣ ಹಾಗೂ ಬೇವಿನ ಎಲೆಯನ್ನ ಬಳಸಿ ಈ ಆರ್ಗಾನಿಕ್ ಸ್ಯಾನಿಟರಿ ಪ್ಯಾಡ್ಗಳನ್ನ ತಯಾರಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಡ್ಗಳು ಅಷ್ಟೊಂದು ಸುಲಭವಾಗಿ ಕರಗುವ ಸಾಮರ್ಥ್ಯ ಹೊಂದಿಲ್ಲ. ಈ ಸಮಸ್ಯೆಗೆ ಪರಿಹಾರವನ್ನ ಹುಡುಕಬೇಕು ಅಂತಾ ನಾವು ಆರ್ಗಾನಿಕ್ ವಸ್ತುಗಳನ್ನ ಬಳಸಿ ಈ ಆವಿಷ್ಕಾರ ಮಾಡಿದ್ದೇವೆ ಅಂತಾ ವಿದ್ಯಾರ್ಥಿನಿಯರು ಹೇಳಿದ್ದಾರೆ. ಇದು ಮಾತ್ರವಲ್ಲದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟರಿ ಪ್ಯಾಡ್ಗಳಿಗೆ ಪೆಟ್ರೋಲಿಯಂ ಜೆಲ್ಲಿಯನ್ನ ಬಳಕೆ ಮಾಡಲಾಗ್ತಿದ್ದು ಇದರಿಂದ ಮಹಿಳೆಯರ ಆರೋಗ್ಯಕ್ಕೂ ಹಾಗೂ ಪರಿಸರಕ್ಕೂ ಹಾನಿ ಉಂಟಾಗುತ್ತೆ ಅಂತಾ ಮಾಹಿತಿ ನೀಡಿದ್ರು.
ಬೇವಿನ ಎಲೆಗಳು, ಮೆಂತ್ಯೆ ಹಾಗೂ ಅರಿಶಿಣವನ್ನ ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿ ಬಳಿಕ ಅದು ಸ್ಯಾನಿಟರಿ ಪ್ಯಾಡ್ಗಳ ರೀತಿಯಲ್ಲಿ ಗಟ್ಟಿಯಾಗುವವರೆಗೂ ಒಣಗಿಸಿ ಬಳಿಕ ಅದನ್ನ ಪ್ಯಾಡ್ ಗಾತ್ರಕ್ಕೆ ಕತ್ತರಿಸಲಾಗುತ್ತೆ. ಇದಾದ ಬಳಿಕ ಈ ಪ್ಯಾಡ್ಗೆ ಮೆಂತ್ಯೆ ಹಾಗೂ ಸಬ್ಜಾ ಬೀಜಗಳನ್ನ ಜೇನುಮೇಣದಿಂದ ತಯಾರಿಸಿದ ಅಂಟನ್ನ ಹಾಕಲಾಗುತ್ತೆ. ಇವುಗಳ ಒಳಗೆ ಹತ್ತಿಯನ್ನ ಇಟ್ಟು ಸೀಲ್ ಮಾಡಲಾಗುತ್ತೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.