ತೆಲಂಗಾಣ ರಾಜ್ಯ ಸರ್ಕಾರಕ್ಕೆ ಸೇರಿದ ನೌಕರರು ಏಪ್ರಿಲ್ 1ನೇ ತಾರೀಖಿನಿಂದ ತಮ್ಮ ವೇತನದಲ್ಲಿ 30 ಪ್ರತಿಶತ ಏರಿಕೆಯನ್ನ ಕಾಣಲಿದ್ದಾರೆ. ಇದರ ಜೊತೆಯಲ್ಲಿ ತೆಲಂಗಾಣ ಸರ್ಕಾರ, ನೌಕರರ ನಿವೃತ್ತಿ ವಯಸ್ಸನ್ನ 58 ವರ್ಷದಿಂದ 61ವರ್ಷಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ. ಈ ಸಂಬಂಧ ಸ್ವತಃ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಘೋಷಣೆ ಮಾಡಿದ್ದಾರೆ.
11ನೇ ವೇತನ ಆಯೋಗದ ಶಿಫಾರಸನ್ನ ಆಧರಿಸಿ ತೆಲಂಗಾಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಐಎಎಸ್ ಅಧಿಕಾರಿ ಸಿ.ಆರ್. ಬಿಸ್ವಾಲ್ ನೇತೃತ್ವದ 11ನೇ ವೇತನ ಆಯೋಗ 7 ಪ್ರತಿಶತ ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಕೆಸಿಆರ್ ವಿಧಾನಸಭೆಯಲ್ಲಿ ಶೇಕಡಾ 30ರಷ್ಟು ವೇತನ ಏರಿಕೆ ಮಾಡಿದ್ದಾರೆ.
ನಾವು ಏಪ್ರಿಲ್ 1ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ 30 ಪ್ರತಿಶತ ಸಂಬಳ ಏರಿಕೆ ಮಾಡಲಿದ್ದೇವೆ ಎಂದು ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ಹೇಳಿದ್ರು.