alex Certify ತೆಲಂಗಾಣ ಸರ್ಕಾರಿ ನೌಕರರಿಗೆ ಬಂಪರ್​….! 30 ಪ್ರತಿಶತ ವೇತನ ಏರಿಕೆ ಮಾಡಿದ ಕೆಸಿಆರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲಂಗಾಣ ಸರ್ಕಾರಿ ನೌಕರರಿಗೆ ಬಂಪರ್​….! 30 ಪ್ರತಿಶತ ವೇತನ ಏರಿಕೆ ಮಾಡಿದ ಕೆಸಿಆರ್​

ತೆಲಂಗಾಣ ರಾಜ್ಯ ಸರ್ಕಾರಕ್ಕೆ ಸೇರಿದ ನೌಕರರು ಏಪ್ರಿಲ್​ 1ನೇ ತಾರೀಖಿನಿಂದ ತಮ್ಮ ವೇತನದಲ್ಲಿ 30 ಪ್ರತಿಶತ ಏರಿಕೆಯನ್ನ ಕಾಣಲಿದ್ದಾರೆ. ಇದರ ಜೊತೆಯಲ್ಲಿ ತೆಲಂಗಾಣ ಸರ್ಕಾರ, ನೌಕರರ ನಿವೃತ್ತಿ ವಯಸ್ಸನ್ನ 58 ವರ್ಷದಿಂದ 61ವರ್ಷಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ. ಈ ಸಂಬಂಧ ಸ್ವತಃ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಘೋಷಣೆ ಮಾಡಿದ್ದಾರೆ.

11ನೇ ವೇತನ ಆಯೋಗದ ಶಿಫಾರಸನ್ನ ಆಧರಿಸಿ ತೆಲಂಗಾಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಐಎಎಸ್​ ಅಧಿಕಾರಿ ಸಿ.ಆರ್.​ ಬಿಸ್ವಾಲ್​ ನೇತೃತ್ವದ 11ನೇ ವೇತನ ಆಯೋಗ 7 ಪ್ರತಿಶತ ವೇತನ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಕೆಸಿಆರ್​ ವಿಧಾನಸಭೆಯಲ್ಲಿ ಶೇಕಡಾ 30ರಷ್ಟು ವೇತನ ಏರಿಕೆ ಮಾಡಿದ್ದಾರೆ.

ನಾವು ಏಪ್ರಿಲ್​ 1ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ 30 ಪ್ರತಿಶತ ಸಂಬಳ ಏರಿಕೆ ಮಾಡಲಿದ್ದೇವೆ ಎಂದು ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್​ ರಾವ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...