ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಉಮಾ ಭಾರತಿ, ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಗುಡ್ ಬಾಯ್ ಅಂತಾ ಹೇಳಿದ್ದಾರೆ.
ಬಿಹಾರ ಚುನಾವಣೆಯ ಫಲಿತಾಂಶವನ್ನ ಸ್ವಾಗತಿಸಿ ಭೂಪಾಲ್ನಲ್ಲಿ ಮಾತನಾಡಿದ ಉಮಾ ಭಾರತಿ, ತೇಜಸ್ವಿ ತುಂಬಾ ಒಳ್ಳೆಯ ಹುಡುಗ, ಆದರೆ ಆತನಿಗೆ ಬಿಹಾರವನ್ನ ನಡೆಸಿಕೊಂಡು ಹೋಗುವಷ್ಟು ಅನುಭವವಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ತೇಜಸ್ವಿ ಯಾದವ್ ಬಿಹಾರದ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗುತ್ತಿದ್ದರೆ ಆತನ ತಂದೆ ಲಾಲು ಪ್ರಸಾದ್ ಯಾದವ್ ಬಿಹಾರದಲ್ಲಿ ಹಿಂಬಾಗಿಲಿನ ರಾಜಕಾರಣ ನಡೆಸುತ್ತಿದ್ದರು ಅಂತಾ ಅಭಿಪ್ರಾಯ ಪಟ್ಟಿದ್ದಾರೆ.