ಕೊರೋನಾ ಲಾಕ್ ಡೌನ್ ಸಮಯದಲ್ಲಿ ದೈನಂದಿನ ಜೀವನ ನಡೆಸುವುದೂ ತ್ರಾಸದಾಯಕವಾದ ಮೇಲೆ ಬ್ಯಾಂಕೊಂದಕ್ಕೆ ಸಣ್ಣ ಲೋನ್ ಕೋರಿ ಅರ್ಜಿ ಸಲ್ಲಿಸಿದ್ದ ಹರಿಯಾಣದ ಕುರುಕ್ಷೇತ್ರದ ಚಹಾ ವ್ಯಾಪಾರಿಗೆ ದೊಡ್ಡ ಶಾಕ್ ಒಂದು ಕಾದಿದೆ.
ರಾಜ್‌ಕುಮಾರ್ ಹೆಸರಿನ ಈ ಪುಟ್ಟ ವ್ಯಾಪಾರಿ ಸಲ್ಲಿಸಿದ್ದ ಲೋನ್ ಅರ್ಜಿಯನ್ನು ತಿರಸ್ಕರಿಸಿದ ಬ್ಯಾಂಕ್, ಅವರಿಗೆ 50 ಕೋಟಿ ರೂ.ಗಳ ಸಾಲ ಮರುಪಾವತಿಯ ನೊಟೀಸ್ ಕಳುಹಿಸಿದೆ. ಆದರೆ, ಈತ ಯಾವುದೇ ಸಾಲವನ್ನೂ ಸಹ ಬ್ಯಾಂಕಿನಿಂದ ಪಡೆದುಕೊಂಡಿಲ್ಲ.
ಈ ಹಿಂದೆ ಎಂದೂ ಸಹ ಸಾಲಕ್ಕೆ ಅರ್ಜಿ ಸಲ್ಲಿಸದ ತನಗೆ ಅದು ಹೇಗೆ ಈ ರೀತಿಯ ಸಾಲ ಮರುಪಾವತಿ ನೊಟೀಸ್ ಬಂದಿದೆ ಎಂದು ಅಚ್ಚರಿಗೀಡಾಗಿದ್ದಾರೆ ರಾಜ್‌ಕುಮಾರ್. ಮತ್ತೊಬ್ಬರ ಹೆಸರಿನಲ್ಲಿ ಸಾಲ ಪಡೆದು ವಂಚಿಸುವ ಜಾಲವೊಂದಕ್ಕೆ ರಾಜ್‌ಕುಮಾರ್ ಸಿಕ್ಕಿಹಾಕಿಕೊಂಡಿರಬಹುದು ಎಂದು ಟ್ವಿಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ.
https://twitter.com/ANI/status/1286083395294908416?ref_src=twsrc%5Etfw%7Ctwcamp%5Etweetembed%7Ctwterm%5E1286083395294908416%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Ftea-seller-in-haryana-applies-for-loan-gets-rs-50-crore-repayment-notice-from-bank%2F626007