ಉತ್ತರಾಖಂಡ್ ಮಸ್ಸೂರಿ ಕಂಫ್ಟಿ ಫಾಲ್ಸ್ ಬಳಿ ಯೋಧರು ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಭಾರಿ ಪ್ರಪಾತಕ್ಕೆ ಬೀಳುವ ಹಂತಕ್ಕೆ ಜಾರಿದೆ.
ಇಂಜಿನ್ ನೆಲಕ್ಕೆ ತಾಗಿ ಮುಂದಿನ ಚಕ್ರ ಸೇರಿ ಅರ್ಧ ಬಸ್ ಗಾಳಿಯಲ್ಲಿ ತೇಲಾಡಿದೆ. ಕೂಡಲೇ ಬಸ್ ನಲ್ಲಿದ್ದ 30 ಯೋಧರು ಕೆಳಗೆ ಇಳಿದಿದ್ದಾರೆ. ಐಟಿಬಿಪಿ ಯೋಧರು ಪ್ರಯಾಣಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಂಫ್ಟಿ ಫಾಲ್ಸ್ ಬಳಿಯಲ್ಲೇ ಇರುವ ಹೋಟೆಲ್ ಗೆ ನುಗ್ಗಿದೆ.
ಈ ವೇಳೆ ಬಸ್ ಅರ್ಧಭಾಗ ಗಾಳಿಯಲ್ಲಿ ತೇಲಿದ್ದು ಕೂಡಲೇ ಸಮಯಪ್ರಜ್ಞೆ ಮೆರೆದ ಯೋಧರು ಬಸ್ ನಿಂದ ಕೆಳಗೆ ಇಳಿದಿದ್ದಾರೆ. ನಂತರದಲ್ಲಿ ಬಸ್ ಹಿಂದಕ್ಕೆ ಎಳೆಯಲಾಗಿದೆ.