
ಆದರೆ ಕ್ಲಬ್ ಎಫ್ಎಂನಲ್ಲಿ ಆರ್ಜೆ ರಫಿ ಜೊತೆ ಕಾಣಿಸಿಕೊಂಡ ಶಶಿ ತರೂರ್ಗೆ 10ನೇ ತರಗತಿಯ ದಿಯಾ ಎಂಬ ವಿದ್ಯಾರ್ಥಿನಿ ಇಂಗ್ಲಿಷ್ನಲ್ಲಿ ಈವರೆಗೆ ಶಶಿ ತರೂರ್ ಕೇಳದ ಶಬ್ದಗಳನ್ನ ಉಚ್ಚರಿಸುವ ಮೂಲಕ ಶಶಿ ತರೂರ್ರನ್ನ ಆಶ್ಚರ್ಯಕ್ಕೊಳಗಾಗುವಂತೆ ಮಾಡಿದ್ದಾರೆ.
ಝೂಮ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿ ತನ್ನ ಟ್ಯಾಲೆಂಟ್ನ್ನ ಪ್ರದರ್ಶಿಸಿದ್ದಾರೆ. ಶೋನಲ್ಲಿ ದಿಯಾ ಕೆಲ ಟಂಗ್ ಟ್ವಿಸ್ಟರ್ಗಳನ್ನ ಒಂದು ಚೂರು ತೊದಲದೇ ಹೇಳಿದ್ದಾರೆ. ಶಶಿ ತರೂರ್ ದಿಯಾ ಬಳಿ ಆಕೆ ಉಚ್ಚರಿಸಿದ ಶಬ್ದಗಳ ಅರ್ಥವನ್ನ ಕೇಳಿದ್ದಾರೆ.
ಇದಕ್ಕೆ ದಿಯಾ ಇದೊಂದು ಕಾಲ್ಪನಿಕ ಆಹಾರದ ಹೆಸರು ಅಂತಾ ಹೇಳಿದ್ದಾರೆ. ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಶಶಿ ತರೂರ್, ನಾನು ಈವರೆಗೆ ಇಂಗ್ಲಿಷ್ನಲ್ಲಿ ಕೇಳದ ಶಬ್ದಗಳನ್ನ ಬಳಸಿ ದಿಯಾ ಟಂಗ್ ಟ್ವಿಸ್ಟರ್ ಮಾಡಿದ್ದಾರೆ ಅಂತಾ ಬರೆದುಕೊಂಡಿದ್ದಾರೆ.