ರೈಲಿನ ಇಂಜಿನ್ನ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಹೋದ 14 ವರ್ಷದ ಬಾಲಕ ಶಾಕ್ ಹೊಡೆದು ಸಾವನ್ನಪ್ಪಿದ ಘಟನೆ ತಮಿಳುನಾಡು ತಿರುನೆಲ್ವೇಲಿಯಲ್ಲಿ ನಡೆದಿದೆ.
9ನೇ ತರಗತಿ ವಿದ್ಯಾರ್ಥಿ ಜ್ಞಾನೇಶ್ವರನ್ ಎಂಬಾತ ತಿರುನ್ವೇಲಿ ಜಂಕ್ಷನ್ನಲ್ಲಿ ನಿಂತಿದ್ದ ರೈಲನ್ನ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಆದರೆ ಈ ವೇಳೆ ಹೈ ವೋಲ್ಟೇಜ್ ಪವರ್ ಲೈನ್ ತಾಕಿದ ಪರಿಣಾಮ ಆತ ಕ್ಷಣಮಾತ್ರದಲ್ಲಿ ಮೃತಪಟ್ಟಿದ್ದಾನೆ.
ಜ್ಞಾನೇಶ್ವರನ್ ತಂದೆ ಸರ್ಕಾರಿ ಉದ್ಯೋಗಿಯಾಗಿದ್ದು ರಾಜ್ಯ ಸಿವಿಲ್ ಸಪ್ಲೈ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದುರಂತ ನಡೆಯುತ್ತಿದ್ದ ವೇಳೆ ಬಾಲಕನ ತಂದೆ ಇದೇ ರೈಲ್ವೇ ನಿಲ್ದಾಣದ ಬೇರೆ ಫ್ಲಾಟ್ಫಾರಂನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಅಂತಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.