alex Certify ʼಕೊರೊನಾʼ ನಿಯಂತ್ರಣಕ್ಕೆ ಬಾಬಾ ರಾಮ್ ದೇವ್ ಸಪ್ತಸೂತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ನಿಯಂತ್ರಣಕ್ಕೆ ಬಾಬಾ ರಾಮ್ ದೇವ್ ಸಪ್ತಸೂತ್ರ

ಯೋಗ ಗುರು ಬಾಬಾ ರಾಮ್ದೇವ್ ಕೊರೊನಾ ನಿಯಂತ್ರಣದ ಬಗ್ಗೆ ಸಲಹೆ ನೀಡಿದ್ದಾರೆ. ಇಂಡಿಯಾ ಟಿವಿಯಲ್ಲಿ ಮಾತನಾಡಿದ ಬಾಬಾ ರಾಮ್ದೇವ್ ಜನರಿಗೆ ಸಪ್ತ ಸೂತ್ರಗಳನ್ನು ಹೇಳಿದ್ದಾರೆ.

ಕೊರೊನಾ ಅಧಿಕ ರಕ್ತದೊತ್ತಡ, ದುರ್ಬಲ ಹೃದಯ ಮತ್ತು ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ಸಾವು ಸಂಭವಿಸುತ್ತಿದೆ. ಶ್ವಾಸಕೋಶ ಆರೋಗ್ಯವಾಗಿರುವ, ಹೃದಯವು ಉತ್ತಮವಾಗಿರುವ, ಸಕ್ಕರೆ ಖಾಯಿಲೆಯಿಲ್ಲದ, ಸಿಗರೇಟ್‌ಗೆ ವ್ಯಸನಿಯಾಗದವರು ಸುಲಭವಾಗಿ ಕೊರೊನಾದಿಂದ ಮುಕ್ತಿ ಹೊಂದಬಹುದು ಎಂದಿದ್ದಾರೆ. ಇವುಗಳ ಆರೋಗ್ಯ ಕಾಪಾಡುವುದು ಮುಖ್ಯವೆಂದು ಅವರು ಹೇಳಿದ್ದಾರೆ.

ಬಾಬಾ ರಾಮ್ದೇವ್ ಪ್ರಕಾರ ಪ್ರತಿ ದಿನ 5 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಮಾಡಬೇಕು. ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿಡುತ್ತದೆ. ನೆನಪಿನ ಶಕ್ತಿ ಹೆಚ್ಚಾಗುವ ಜೊತೆಗೆ ತೂಕ ಕಡಿಮೆಯಾಗುತ್ತದೆ. ಚರ್ಮದ ಹೊಳಪು ಹೆಚ್ಚಾಗುವ ಜೊತೆಗೆ ಒತ್ತಡ ಕಡಿಮೆಯಾಗುತ್ತದೆ. ಆತ್ಮವಿಶ್ವಾಸ, ತಾಳ್ಮೆ ಹೆಚ್ಚಾಗಿ ಭಯ ದೂರವಾಗುತ್ತದೆ ಎಂದಿದ್ದಾರೆ.

ಹಾಗೆ ಪ್ರತಿ ದಿನ ಭಸ್ತ್ರಿಕಾ ಪ್ರಾಣಾಯಾಮ ಮಾಡಬೇಕೆಂದು ಬಾಬಾ ರಾಮ್ ದೇವ್ ಹೇಳಿದ್ದಾರೆ. ದೇಹದಲ್ಲಿ ಆಮ್ಲಜನಕದ ಮಟ್ಟ ಹೆಚ್ಚಾಗುತ್ತದೆ. ಇದರಿಂದಾಗಿ ಕ್ಯಾನ್ಸರ್ ಕೋಶಗಳು ಸಾಯುತ್ತವೆ.

ಪ್ರತಿ ದಿನ ಕಪಾಲಬಾತಿ ಮಾಡುವಂತೆ ಸಲಹೆ ನೀಡಿದ್ದಾರೆ. ಬೆಳಿಗ್ಗೆ – ಸಂಜೆ ಕಪಾಲಬಾತಿ ಮಾಡಬೇಕು. ಇದು ಹೃದಯ ಸಮಸ್ಯೆ ಕಡಿಮೆ ಮಾಡಿ, ಮನಸ್ಸನ್ನು ಶಾಂತಗೊಳಿಸುತ್ತದೆ. ಥೈರಾಯ್ಡ್ ದೂರ ಮಾಡುತ್ತದೆ. ಸಿಗರೇಟ್ ಚಟ ನಿಯಂತ್ರಣಕ್ಕೆ ಇದು ಸಹಕಾರಿ. ಮೂತ್ರಪಿಂಡ, ಪಿತ್ತಜನಕಾಂಗದ ಸಮಸ್ಯೆ ಕಡಿಮೆ ಮಾಡುತ್ತದೆ ಎಂದು ಬಾಬಾ ರಾಮ್ ದೇವ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...