ಮಕ್ಕಳು ಪೋಷಕರ ಕಣ್ಣಿದ್ದಂತೆ. ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನ ಸಾಬೀತು ಪಡಿಸೋಕೆ ಪೋಷಕರು ಏನ್ ಬೇಕಿದ್ರು ಮಾಡ್ತಾರೆ.
ಅದೇ ರೀತಿ ಸೂರತ್ನ ಉದ್ಯಮಿ ವಿಜಯ್ಭಾಯ್ ಕಠರಿಯಾ ಎಂಬವರು ತಮ್ಮ 2 ತಿಂಗಳ ಗಂಡು ಮಗುವಿಗೆ ವಿಶೇಷವಾಗಿ ಏನಾದರೂ ಉಡುಗೊರೆ ನೀಡಬೇಕು ಅಂತಾ ಪ್ಲಾನ್ ಮಾಡಿದ್ದರು. ಹೀಗಾಗಿ ತಮ್ಮ ಮಗು ನಿತ್ಯಾಗಾಗಿ ಚಂದ್ರನ ಅಂಗಳದಲ್ಲಿ ಜಾಗವನ್ನ ಖರೀದಿ ಮಾಡಿದ್ದಾರೆ.
ಇದಕ್ಕಾಗಿ ವಿಜಯ್ ನ್ಯೂಯಾರ್ಕ್ನ ಅಂತಾರಾಷ್ಟ್ರೀಯ ಲುನಾರ್ ನೋಂದಾವಣಿ ಕೇಂದ್ರದಿಂದ ಅನುಮತಿ ಪಡೆದಿದ್ದಾರೆ. ಇದಕ್ಕಾಗಿ ಬೇಕಾದ ಎಲ್ಲಾ ದಾಖಲೆಗಳನ್ನೂ ವಿಜಯ್ ಸಲ್ಲಿಸಿದ್ದರು.
ಇದೀಗ ಈ ಜಾಗವನ್ನ ವಿಜಯ್ ಮಗುವಿನ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ. ಈ ಜಾಗವು ಮಾರೆ ಮೊಮೊಸ್ಕೊವಿಯೆನ್ಸ್ ನಲ್ಲಿದೆ.
ಈ ಜಾಗದ ನಿಜವಾದ ಬೆಲೆ ಎಷ್ಟು ಅನ್ನೋದು ಇನ್ನೂ ವರದಿಯಾಗಿಲ್ಲ. ಆದರೆ ಅಲ್ಲಿ ಜಾಗ ಖರೀದಿ ಮಾಡಬೇಕು ಅಂದರೆ 750 ಡಾಲರ್ ಅಂತೂ ಬೇಕು ಎಂದು ಹೇಳಲಾಗುತ್ತೆ.
ಈ ಮೂಲಕ ಚಂದ್ರನ ಅಂಗಳದಲ್ಲಿ ಭೂಮಿಯನ್ನ ಖರೀದಿಸಿದ ಸೂರತ್ನ ಮೊದಲ ಉದ್ಯಮಿ ಎಂಬ ಕೀರ್ತಿಗೆ ವಿಜಯ್ ಸಾಕ್ಷಿಯಾಗಿದ್ದಾರೆ.
ಚಂದ್ರನ ಅಂಗಳದಲ್ಲಿ ಯಾರಿಗೂ ಆಸ್ತಿ ಮಾಡೋಕೆ ಸಾಧ್ಯವಿಲ್ಲ. ಆದರೆ ಈ ಪ್ರಮಾಣ ಪತ್ರವನ್ನ ಪಡೆಯೋಕೆ ಇಷ್ಟು ವೆಚ್ಚವಾಗುತ್ತದೆ. ಚಂದ್ರನ ಅಂಗಳದಲ್ಲಿ ಜಾಗ ಪಡೆಯೋದನ್ನ ಉತ್ತಮ ಗಿಫ್ಟ್ ಎಂದು ಭಾವಿಸಲಾಗುತ್ತೆ.
ಈ ಹಿಂದೆ ರಾಜಸ್ಥಾನದ ಧರ್ಮೇಂದ್ರ ಅನಿಜಾ ಎಂಬವರು ಚಂದ್ರನ ಅಂಗಳದಲ್ಲಿ ಮೂರು ಎಕರೆ ಭೂಮಿ ಖರೀದಿ ಮಾಡಿ ಅದನ್ನ ತಮ್ಮ ಪತ್ನಿ ಸಪ್ನಾ ಅನಿಜಾರಿಗೆ ಮದುವೆ ವಾರ್ಷಿಕೋತ್ಸವದಂದು ಗಿಫ್ಟ್ ರೂಪದಲ್ಲಿ ನೀಡಿದ್ದರು.