ವಾಟ್ಸಾಪ್ ಮೆಸೆಂಜರ್ನ ಹೊಸ ಪ್ರೈವೆಸಿ ಪಾಲಿಸಿಯ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಹೊಸ ಸೇವಾ ನಿಯಮದ ವಿರುದ್ಧ ಸಿಎಐಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಈ ಸಂಬಂಧ ವಿಚಾರಣೆಗೆ ಸರ್ವೋಚ್ಛ ನ್ಯಾಯಾಲಯ ನಿರಾಕರಿಸಿದೆ. ದೆಹಲಿ ಹೈಕೋರ್ಟ್ನಲ್ಲಿ ಈ ಸಂಬಂಧ ವಿಚಾರಣೆ ಮೊದಲೇ ನಡೆಯುತ್ತಿರೋದ್ರಿಂದ ಅರ್ಜಿಯನ್ನ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
16 ಜನವರಿಯಂದು ಸಿಎಐಟಿ ಸುಪ್ರೀಂ ಕೋರ್ಟ್ನಲ್ಲಿ ವಾಟ್ಸಾಪ್ನ ಹೊಸ ಸೇವಾನಿಯಮವನ್ನ ಪ್ರಶ್ನಿಸಿ ಅರ್ಜಿ ಸಲ್ಲಿಸಿತ್ತು. ಆದರೆ ವಾಟ್ಸಾಪ್ನ ಹೊಸ ಸೇವಾ ನಿಯಮವನ್ನ ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಈಗಾಗಲೇ ಅರ್ಜಿ ವಿಚಾರಣೆ ಜಾರಿಯ್ಲಲಿದೆ.
ಅರ್ಜಿ ವಿಚಾರಣೆ ವೇಳೆ ಕೋರ್ಟ್, ವಾಟ್ಸಾಪ್ ಒಂದು ಖಾಸಗಿ ಮೆಸೆಜಿಂಗ್ ಅಪ್ಲಿಕೇಶನ್ ಆಗಿದ್ದು ಇದರ ಸೇವಾನಿಯಮದ ಬಗ್ಗೆ ಗೊಂದಲ ಇರುವವರು ಬೇರೆ ಅಪ್ಲಿಕೇಶನ್ಗಳನ್ನ ಬಳಕೆ ಮಾಡಿ ಎಂದು ಸಲಹೆ ನೀಡಿತ್ತು.