alex Certify ಸಪ್ತಪದಿ ತುಳಿದ ಆ ಜೋಡಿ ಮದುವೆ ಊಟ ಹಾಕಿದ್ದು ಯಾರಿಗೆ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಪ್ತಪದಿ ತುಳಿದ ಆ ಜೋಡಿ ಮದುವೆ ಊಟ ಹಾಕಿದ್ದು ಯಾರಿಗೆ ಗೊತ್ತಾ…?

ಮದುವೆ ಅಂದ್ರೆ ಸಾಕು…..ಸಂಬಂಧಿಕರಿಗೆ, ಸ್ನೇಹಿತರಿಗೆ ಔತಣಕೂಟ ಏರ್ಪಡಿಸೋದು ಸಾಮಾನ್ಯ. ಅದೇ ರೀತಿ ಮದುವೆ ಸಂಭ್ರಮದಲ್ಲಿದ್ದ ಒಡಿಶಾ ಮೂಲದ ದಂಪತಿ ಕೂಡ 500 ಬೀದಿ ನಾಯಿಗಳಿಗೆ ಊಟ ಬಡಿಸೋ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಯುರೆಕಾ ಅಪ್ರಾ ಹಾಗೂ ಜೋವನ್ನಾ ವಾಂಗ್​ ಸೆಪ್ಟೆಂಬರ್​ 25ರಂದು ಭುವನೇಶ್ವರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು. ಆದರೆ ಅವ್ರು ತಮ್ಮ ಈ ಸಂಭ್ರಮವನ್ನ ಬೀದಿ ನಾಯಿಗಳ ಜೊತೆ ಆಚರಿಸಿಕೊಂಡಿದ್ದಾರೆ.

500 ಬೀದಿನಾಯಿಗಳಿಗೆ ಊಟ ತಯಾರಿಸಿದ ಈ ದಂಪತಿ ಆನಿಮಲ್​ ಕೇರ್​ ಗ್ರೂಪ್​ ನೆರವಿನೊಂದಿಗೆ ಶ್ವಾನಗಳಿಗೆ ಸ್ಪೆಶಲ್​ ಟ್ರೀಟ್​ ನೀಡಿದ್ದಾರೆ. ಈ ರೀತಿಯ ಒಂದು ಕೆಲಸ ಮಾಡೋದಕ್ಕಾಗಿ ಈ ದಂಪತಿ ಮೊದಲು ಸ್ಥಳೀಯ ಪ್ರಾಣಿ ಸಂರಕ್ಷಣಾ ಸಂಸ್ಥೆಯ ಸದಸ್ಯತ್ವ ಪಡೆದ್ರು. ಇದಾದ ಬಳಿಕ ನಾಯಿಗಳಿಗೆ ಔತಣ ಕೂಟ ನೀಡಿದ್ದು ಮಾತ್ರವಲ್ಲದೇ ಈ ಟ್ರಸ್ಟ್ ​ಗೆ ದೇಣಿಗೆಯನ್ನೂ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...