alex Certify ರಸಾಯನ ಶಾಸ್ತ್ರದ ಸೂತ್ರ ನೆನಪಿಟ್ಟುಕೊಳ್ಳಲು ಇಲ್ಲಿದೆ ಸರಳ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸಾಯನ ಶಾಸ್ತ್ರದ ಸೂತ್ರ ನೆನಪಿಟ್ಟುಕೊಳ್ಳಲು ಇಲ್ಲಿದೆ ಸರಳ ವಿಧಾನ

ರಸಾಯನಶಾಸ್ತ್ರದ ಸೂತ್ರಗಳು, ಆವರ್ತಕ ಕೋಷ್ಟಕಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದೇ ದೊಡ್ಡ ತಲೆನೋವಿನ ಸಂಗತಿ. ಆದರೆ, ಈ ತಲೆನೋವಿಗೂ ಇಲ್ಲಿದೆ ಒಂದು ಸರಳ ಪರಿಹಾರ.

ಉಪನ್ಯಾಸಕ ಅಜಯ್ ಯಶ್ ಪಾಲ್ ಪ್ರಕಾರ ರಸಾಯನಶಾಸ್ತ್ರದ ಸೂತ್ರಗಳು, ಆವರ್ತಕ ಕೋಷ್ಟಕಗಳು ಒಂದರ್ಥದಲ್ಲಿ ಸುಂದರ ಪ್ರೇಮಕಾವ್ಯ. ಅದರಲ್ಲೂ ಹರೆಯದ ಹುಡುಗ-ಹುಡುಗಿಯರು ಸುಲಭ ರೀತಿಯಿಂದ ಸೂತ್ರಗಳನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳಲು ನನ್ನಲ್ಲಿದೆ ಸರಳ ಪರಿಹಾರ ಎನ್ನುತ್ತಾರೆ.

ಇವರ ಈ ಸರಳ ಪರಿಹಾರ ಮಾರ್ಗವೀಗ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅನೇಕರು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಟೀಕಿಸಿದ್ದಾರೆ. ಅದೇನೆ ಇರಲಿ, ವಿಡಿಯೋ ಮಾತ್ರ ಸಖತ್ ವೈರಲ್ ಆಗಿದೆ. ಆವರ್ತಕ ಕೋಷ್ಟಕದ ಮೊದಲ ಅಕ್ಷರಗಳನ್ನು ಇಟ್ಟುಕೊಂಡು, ಒಂದು ವಾಕ್ಯ ರಚಿಸುವುದು. ಅದು ಪ್ರೀತಿಯ ನಿವೇದನೆಯಂತೆ ಇರುತ್ತದೆ.

ಕೋಷ್ಟಕದಲ್ಲಿನ Sc Ti V Cr Mn Fe Co Ni Cu Zn ಇದರಲ್ಲಿನ ಮೊದಲ ಅಕ್ಷರಗಳನ್ನು ಆಧಾರವಾಗಿ ಇಟ್ಟುಕೊಂಡು ಸುನೋ, ತುಮ್ ವಿವಾಹ್ ಕರ್ ಲೋ ಮುಝ್ಸೆ, ಫಿರ್ ಕೋಯಿ ನಹಿ ಕಹೇಗಾ ಜಾನು ಎಂಬುದೊಂದು ವಾಕ್ಯ ತಯಾರಿಸಿದ್ದಾರೆ. ಈ ಸರಳ ವಾಕ್ಯ ನೆನಪಿದ್ದರೆ, ಇಡೀ ಆವರ್ಕತ ಕೋಷ್ಟಕವೂ ನೆನಪಿಲ್ಲಿ ಇರುತ್ತದೆ. ಇದೇ ರೀತಿ ಸೂತ್ರಗಳು, ಆವರ್ತ ಕೋಷ್ಟಕದ ಮೊದಲಕ್ಷರದಿಂದ ಹಲವು ವಾಕ್ಯಗಳನ್ನು ರಚಿಸಿದ್ದು, ಇದಕ್ಕೆ ಕೆಲವರು ಟೀಕೆಯನ್ನೂ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...