ಮನುಷ್ಯತ್ವದ ಮೌಲ್ಯಗಳ ಸಾಕಾರ ರೂಪವಾದ ಚಿತ್ರವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ತರಕಾರಿ ವ್ಯಾಪಾರ ಮಾಡುವ ಮಹಿಳೆಯೊಬ್ಬರು ಖುದ್ದು ತಮ್ಮ ಕೈಗಳಿಂದ ನವಿಲೊಂದಕ್ಕೆ ಆಹಾರ ನೀಡುತ್ತಿರುವ ವಿಡಿಯೋವೊಂದು ಟ್ವಿಟರ್ನಲ್ಲಿ ಹಾಕಲಾಗಿದೆ.
ಒಂದೆಡೆ ತರಕಾರಿ ಮಾರುತ್ತಾ, ಇದೇ ವೇಳೆ ಆ ನವಿಲಿಗೆ ಆಹಾರ ನೀಡುತ್ತಿರುವ ಮಹಿಳೆಯ ವಿಡಿಯೋವನ್ನು ಟಿಂಕು ವೆಂಕಟೇಶ್ ಎಂಬವರು ಶೇರ್ ಮಾಡಿದ್ದಾರೆ. ಈ ದೃಶ್ಯ ರಾಜಸ್ಥಾನದ್ದು ಎನ್ನಲಾಗಿದೆ.
ಹೃದಯ ವೈಶಾಲ್ಯತೆಯ ಈ ವಿಡಿಯೋವನ್ನು ಅದಾಗಲೇ 3,40,700 ಸಲ ವೀಕ್ಷಿಸಲಾಗಿದ್ದು ಬಹಳಷ್ಟು ರೀಟ್ವೀಟ್ ಆಗಿದೆ. ಮೂಕ ಪ್ರಾಣಿಯೆಡೆಗೆ ಆ ಮಹಿಳೆ ತೋರುತ್ತಿರುವ ಪ್ರೀತಿಯನ್ನು ಕಂಡು ನೆಟ್ಟಿಗ ಸಮುದಾಯ ಭೇಷ್ ಎಂದಿದೆ.