ಚಿರತೆ, ಚೀತಾ ಹಾಗೂ ಜಾಗ್ವಾರ್‌ಗಳ ನಡುವೆ ವ್ಯತ್ಯಾಸ ಅಷ್ಟು ಸುಲಭದಲ್ಲಿ ಬಹುತೇಕ ಜನರಿಗೆ ತಿಳಿಯುವುದಿಲ್ಲ. ಭಾರತೀಯ ಅರಣ್ಯ ಸೇವಾಧಿಕಾರಿ ಪರ್ವೀನ್ ಕಾಸ್ವನ್ ತಮ್ಮ ಟ್ವಿಟರ್ ಖಾತೆಯಲ್ಲಿ ಚಿರತೆ ಹಾಗೂ ಜಾಗ್ವಾರ್‌ಗಳ ಚಿತ್ರವನ್ನು ಹಾಕಿದ್ದಾರೆ.
ಚಿರತೆ ಹಾಗೂ ಜಾಗ್ವಾರ್‌ಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿದು ಅವುಗಳನ್ನು ಪತ್ತೆ ಮಾಡಲು ಕಾಸ್ವನ್ ತಿಳಿಸಿದ್ದಾರೆ. ಈ ಚಿತ್ರಗಳಲ್ಲಿ ಪ್ರಾಣಿಗಳ ಮುಖ ಕಾಣುತ್ತಿಲ್ಲ. ಕೇವಲ ಅವುಗಳ ದೇಹಗಳ ಮೇಲಿರುವ ಗುರುತುಗಳನ್ನು ನೋಡಿ ಕಂಡು ಹಿಡಿಯಲು ತಿಳಿಸಿದ್ದಾರೆ.
ಕೋವಿಡ್ ಸುದ್ದಿಗಳನ್ನೇ ಕಣ್ಣು/ಕಿವಿ ತುಂಬಾ ತುಂಬಿಕೊಂಡು ಬೋರಾಗಿ ಹೋಗಿರುವ ಈ ಸಮಯದಲ್ಲಿ ಇಂಥ ಪೋಸ್ಟ್‌ಗಳು ನೆಟ್ಟಿಗರಿಗೆ ಒಳ್ಳೆಯ ರಿಲೀಫ್ ಕೊಡುತ್ತಿವೆ.