
ʼಮನ್ ಕಿ ಬಾತ್ʼ ಕಾರ್ಯಕ್ರಮದ ವೇಳೆ ಕೊಟ್ಟಾಯಂ ಎನ್.ಎಸ್. ರಾಜಪ್ಪನ್ ಅವರ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಕೇರಳದಿಂದ ಬರುವ ಅನೇಕ ಸುದ್ದಿಗಳು ನಮಗೆ ಸಮಾಜದ ಬಗೆಗಿನ ಕಾಳಜಿಯನ್ನ ಹೆಚ್ಚಾಗುವಂತೆ ಮಾಡುತ್ತದೆ. ಕೇರಳದ ಕೊಟ್ಟಾಯಂನ ದಿವ್ಯಾಂಗ ವೃದ್ಧ ಎನ್.ಎಸ್. ರಾಜನ್, ಪಾರ್ಶ್ವವಾಯುವಿನಿಂದ ಸರಿಯಾಗಿ ನಡೆಯಲು ಸಾಧ್ಯವಾಗದೇ ಇದ್ದರೂ ಸಹ, ಇವರ ಪರಿಸರ ಕಾಳಜಿ ಪಾತ್ರ ಕಡಿಮೆಯಾಗಿಲ್ಲ ಎಂದು ಹೇಳಿದ್ರು.
ಕಳೆದ ಅನೇಕ ವರ್ಷಗಳಿಂದ ವೆಂಬಾನಾದ್ ನದಿಯಲ್ಲಿ ದೋಣಿ ವಿಹಾರ ನಡೆಸುವ ರಾಜಪ್ಪನ್ ಎಲ್ಲಾ ಪ್ಲಾಸ್ಟಿಕ್ ಬಾಟಲಿಗಳನ್ನ ನದಿಯಿಂದ ಬೇರ್ಪಡಿಸುತ್ತಾರೆ ಅಂದರೆ ಕಲ್ಪಿಸಿಕೊಳ್ಳಿ, ರಾಜಪ್ಪನ್ ಯೋಚನಾ ಶಕ್ತಿ ಯಾವ ಮಟ್ಟದಲ್ಲಿದೆ ಎಂದು..! ನಾವು ಕೂಡ ರಾಜಪ್ಪನ್ರ ಆದರ್ಶಗಳನ್ನ ಮೈಗೂಡಿಸಿಕೊಂಡು ಪರಿಸರದ ಸ್ವಚ್ಛತೆಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕಿದೆ ಎಂದು ಹೇಳಿದ್ರು.
ಹಲವಾರು ವರ್ಷಗಳಿಂದ ರಾಜಪ್ಪನ್ ಈ ಪರಿಸರ ಕಾಳಜಿ ತೋರಿಸ್ತಾ ಇದ್ದರೂ ಸಹ ಅದು ಸಮಾಜದ ಕಣ್ಣಿಗೆ ಬಿದ್ದಿರಲಿಲ್ಲ. ಆದರೆ ಸ್ಥಳೀಯ ಫೋಟೋಗ್ರಾಫರ್ ಇಬ್ಬರು ಕಳೆದ ತೆಗೆದ ಫೋಟೋದ ಬಳಿಕ ರಾಜಪ್ಪನ್ ಕಾರ್ಯ ಎಲ್ಲೆಡೆ ಸುದ್ದಿಯಾಗಿತ್ತು.
ಇದೀಗ ಎನ್ಆರ್ಐ ಉದ್ಯಮಿ ಶ್ರೀಕುಮಾರ್ ಅವರು ದಿವ್ಯಾಂಗ ರಾಜಪ್ಪನ್ರ ಪರಿಸರ ಕಾಳಜಿಯನ್ನ ಮೆಚ್ಚಿ ಅವರಿಗೆ ಮೋಟಾರ್ ದೋಣಿಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಅದೇ ರೀತಿ ಮತ್ತೊಬ್ಬ ಕೇರಳ ಮೂಲಕ ಕೈಗಾರಿಕೋದ್ಯಮಿ ಬಾಬಿ ಚೆಮ್ಮನೂರ್ ರಾಜಪ್ಪನ್ ಹೊಸ ಮನೆಯೊಂದನ್ನ ಕಟ್ಟಿಸಿಕೊಡಲಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಚೆಮ್ಮನೂರ್, ನಾನು ರಾಜಪ್ಪನ್ ದೋಣಿಯನ್ನ ಕೊಡಿಸೋಣ ಎಂದು ಪ್ಲಾನ್ ಮಾಡಿದ್ದೆ. ಆದರೆ ಈಗಲೇ ಅವರಿಗೆ ದೋಣಿ ಉಡುಗೊರೆಯಾಗಿ ಬಂದಿದ್ದರಿಂದ ನಾನು ಮನೆಯನ್ನ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ಹೇಳಿದ್ರು.

