ಕೇರಳ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಕೊಚ್ಚಿಯ ಎನ್ಐಎ ವಿಶೇಷ ಕೋರ್ಟ್ ಐದು ಮಂದಿ ಆರೋಪಿಗಳನ್ನ ಬುಧವಾರದವರೆಗೆ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ .
ಅಬ್ದು ಪಿಟಿ, ಶರಾಫುದ್ದೀನ್ ಕೆಟಿ, ಮುಹಮ್ಮದ್ ಶಫೀಕ್, ಹಮ್ಜಾದ್ ಅಲಿ ಹಾಗೂ ಮುಹಮ್ಮದ್ ಅಲಿ ಈ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದರು. ಬಂಧಿತ ಆರೋಪಿಗಳನ್ನ ಮೂರು ದಿನಗಳವರೆಗೆ ಎನ್ಐಎ ಕಸ್ಟಡಿಗೆ ನೀಡಿರುವ ವಿಶೇಷ ನ್ಯಾಯಾಲಯ ಗುರುವಾರ ಬಂಧಿತರ ಜಾಮೀನು ಅರ್ಜಿಯನ್ನ ಪರಿಶೀಲಿಸಲಿದೆ.
ಪ್ರಕರಣ ಕಿಂಗ್ ಪಿನ್ ಎಂದೇ ಗುರುತಿಸಿಕೊಂಡಿರುವ ಸ್ವಪ್ನಾ ಸುರೇಶ್ರ ಜಾಮೀನು ಅರ್ಜಿ ವಿಚಾರಣೆಯನ್ನೂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.