ಅಂತಾರಾಷ್ಟ್ರೀಯ ಡ್ರೈವರ್ ಎಜುಕೇಶನ್ ಕಂಪನಿ ಝುಟೋಬಿ ವಿಶ್ವದಲ್ಲಿ ಸರ್ವೇ ಒಂದನ್ನ ನಡೆಸಿದ್ದು ಇದರ ಅನ್ವಯ ದಕ್ಷಿಣ ಆಫ್ರಿಕಾ ವಿಶ್ವದಲ್ಲೇ ಅತ್ಯಂತ ಭಯಾನಕ ರಸ್ತೆಯನ್ನ ಹೊಂದಿದೆ ಎಂದು ಹೇಳಿದೆ. ಈ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನವನ್ನ ಪಡೆದಿದೆ.
56 ದೇಶಗಳಲ್ಲಿ ನಡೆಸಲಾದ ಸರ್ವೇಯಲ್ಲಿ ಥೈಲಾಂಡ್ 2ನೇ ಸ್ಥಾನವನ್ನ ಪಡೆದಿದ್ರೆ ಅಮೆರಿಕ ಮೂರನೇ ಸ್ಥಾನದಲ್ಲಿದೆ.
ಇನ್ನು ವಿಶ್ವದಲ್ಲಿ ಅತ್ಯಂತ ಸುರಕ್ಷಿತ ರಸ್ತೆಯನ್ನ ಹೊಂದಿರುವವರ ಪಟ್ಟಿಯಲ್ಲಿ ಯುರೋಪ್ನ ನಾರ್ವೆ ಮೊದಲ ಸ್ಥಾನದಲ್ಲಿದೆ. ಹಾಗೂ ನಾರ್ವೆಯ ನೆರೆಯ ರಾಷ್ಟ್ರ ಸ್ವೀಡನ್ ಮೂರನೇ ಸ್ಥಾನದಲ್ಲಿದೆ. ಎರಡನೇ ಸ್ಥಾನವನ್ನ ಜಪಾನ್ ಪಡೆದುಕೊಂಡಿದೆ.
ದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತ, ಸೀಟ್ ಬೆಲ್ಟ್ ಬಳಕೆ, ಮದ್ಯಪಾನ ಸೇವಿಸಿ ನಡೆದ ಅಪಘಾತ ಸೇರಿದಂತೆ ಅನೇಕ ವಿಚಾರಗಳನ್ನ ಗಮನದಲ್ಲಿ ಇಟ್ಟುಕೊಂಡು ಝುಟೋಬಿ ಈ ಸ್ಥಾನಗಳನ್ನ ನೀಡಿದೆ.