alex Certify ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಂದು ಪಾಕ್​ ನಿರ್ಮಿತ ಅಕ್ರಮ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​ ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಂದು ಪಾಕ್​ ನಿರ್ಮಿತ ಅಕ್ರಮ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​ ಪಡೆ

ಕೇವಲ 10 ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಿರ್ಮಿಸಿರುವ ಎರಡನೇ ರಹಸ್ಯ ಸುರಂಗವನ್ನ ಭಾರತೀಯ ಯೋಧರು ಪತ್ತೆ ಹಚ್ಚಿದ್ದಾರೆ.

ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರ ಒಳನುಸುಳುವಿಕೆಗೆ ಅನುಕೂಲವಾಗುವಂತೆ ಈ ಸುರಂಗ ನಿರ್ಮಾಣವಾಗಿದೆ ಎಂದು ಭಾರತೀಯ ಸೈನ್ಯ ಮಾಹಿತಿ ನೀಡಿದೆ.

ಕಳೆದ 10 ದಿನಗಳಲ್ಲಿ ಹೀರಾನಗರ ವಲಯದಲ್ಲಿ ಬಿಎಸ್​ಎಫ್​ ಸಿಬ್ಬಂದಿ ಪತ್ತೆ ಹಚ್ಚಿದ ಎರಡನೇ ಅಕ್ರಮ ಸುರಂಗ ಇದಾಗಿದೆ. ಜನವರಿ 13ನೇ ತಾರೀಖಿನಂದು ಬೊಬಿಯಾನ್​ ಗ್ರಾಮದಲ್ಲಿ 150 ಮೀಟರ್​ ಉದ್ದದ ಸುರಂಗವನ್ನ ಪತ್ತೆ ಹಚ್ಚಲಾಗಿತ್ತು. ಕಳೆದ ಆರು ತಿಂಗಳಲ್ಲಿ ಈ ರೀತಿಯ ನಾಲ್ಕು ಸುರಂಗಗಳನ್ನ ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...