ಕೇವಲ 10 ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಿರ್ಮಿಸಿರುವ ಎರಡನೇ ರಹಸ್ಯ ಸುರಂಗವನ್ನ ಭಾರತೀಯ ಯೋಧರು ಪತ್ತೆ ಹಚ್ಚಿದ್ದಾರೆ.
ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರ ಒಳನುಸುಳುವಿಕೆಗೆ ಅನುಕೂಲವಾಗುವಂತೆ ಈ ಸುರಂಗ ನಿರ್ಮಾಣವಾಗಿದೆ ಎಂದು ಭಾರತೀಯ ಸೈನ್ಯ ಮಾಹಿತಿ ನೀಡಿದೆ.
ಕಳೆದ 10 ದಿನಗಳಲ್ಲಿ ಹೀರಾನಗರ ವಲಯದಲ್ಲಿ ಬಿಎಸ್ಎಫ್ ಸಿಬ್ಬಂದಿ ಪತ್ತೆ ಹಚ್ಚಿದ ಎರಡನೇ ಅಕ್ರಮ ಸುರಂಗ ಇದಾಗಿದೆ. ಜನವರಿ 13ನೇ ತಾರೀಖಿನಂದು ಬೊಬಿಯಾನ್ ಗ್ರಾಮದಲ್ಲಿ 150 ಮೀಟರ್ ಉದ್ದದ ಸುರಂಗವನ್ನ ಪತ್ತೆ ಹಚ್ಚಲಾಗಿತ್ತು. ಕಳೆದ ಆರು ತಿಂಗಳಲ್ಲಿ ಈ ರೀತಿಯ ನಾಲ್ಕು ಸುರಂಗಗಳನ್ನ ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.