ನವದೆಹಲಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನವದೆಹಲಿ ಗಡಿಯಲ್ಲಿ ರೈತರು ನಡೆಸಿರುವ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನಾನಿರತ ರೈತರ ಮೂಲ ಅವಶ್ಯಕತೆಗಳಿಗಾಗಿ ಎರಡು ಉಚಿತ ಮಾಲ್ ಗಳನ್ನು ತೆರೆಯಲಾಗಿದೆ.
ತಿಕರಿ ಗಡಿ ಹಾಗೂ ಸಿಂಗು ಗಡಿಯಲ್ಲಿ ಕಳಸಾ ಏಡ್ ನಿಂದ ತಲಾ ಒಂದೊಂದು ಮಾಲ್ ಗಳನ್ನು ಪ್ರಾರಂಭಿಸಲಾಗಿದೆ. ಅಲ್ಲಿ ಟೂತ್ ಪೇಸ್ಟ್, ಬ್ರಷ್, ಬಾತ್ ಸೋಪ್, ಚಾದರ, ಚಪ್ಪಲಿ ಮುಂತಾದ 28 ಅಗತ್ಯ ವಸ್ತುಗಳನ್ನು ಇರಿಸಲಾಗಿದೆ.
ಈ ವಸ್ತುಗಳು ಸಂಪೂರ್ಣ ಉಚಿತವಾಗಿವೆ. ರೈತರ ಹೆಸರು ನಕಲು ಮಾಡಿ ಹೆಚ್ಚು ವಸ್ತುಗಳನ್ನು ಕೊಂಡೊಯ್ಯುವುದನ್ನು ತಡೆಯಲು ಹೆಸರು, ಫೋನ್ ನಂಬರ್ ಜತೆ ಆಧಾರ ಸಂಖ್ಯೆ ನೋಂದಾಯಿಸುವುದನ್ನು ಕಡ್ಡಾಯ ಮಾಡಲಾಗಿದೆ.