alex Certify ATM ನಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ರು ಹಣ ಪಡೆಯಲು ಬಂದ ಗ್ರಾಹಕರು: ಕಾರಣ ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ನಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ರು ಹಣ ಪಡೆಯಲು ಬಂದ ಗ್ರಾಹಕರು: ಕಾರಣ ಗೊತ್ತಾ…?

ಉತ್ತರ ಪ್ರದೇಶ ಗಾಜಿಯಾಬಾದ್ ನಲ್ಲಿ ಎಟಿಎಂ ಒಂದರಲ್ಲಿ ಹಣ ಪಡೆಯಲು ಬಂದಿದ್ದ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಬೃಹತ್ ಗಾತ್ರದ ಹಾವೊಂದು ಎಟಿಎಂನಲ್ಲಿ ಸೇರಿಕೊಂಡಿದ್ದು ಎಷ್ಟೇ ಸದ್ದು ಮಾಡಿದರೂ, ಹೊರಗೆ ಬಂದಿಲ್ಲ.

ಇದರಿಂದಾಗಿ ಹಣ ಪಡೆಯಲು ಗ್ರಾಹಕರು ದೂರ ಸರಿದಿದ್ದಾರೆ. ಬಹು ಹೊತ್ತಿನವರೆಗೂ ಹಾವು ಹೊರಗೆ ಹೋಗದೆ ಅಲ್ಲೇ ಅಡ್ಡಾಡಿದೆ. ಕೊನೆಗೆ ಉರಗ ರಕ್ಷಕರನ್ನು ಕರೆಸಿ ಹಾವನ್ನು ಹಿಡಿಸಲಾಗಿದೆ.

ಗಾಜಿಯಾಬಾದ್ ಗೋವಿಂದಪುರಂನವಲ್ಲಿರುವ ಡೆಹರಾಡೂನ್ ಪಬ್ಲಿಕ್ ಶಾಲೆ ಸಮೀಪದ ಜೆ ಬ್ಲಾಕ್ ಮಾರ್ಕೆಟ್ ಖಾಸಗಿ ಬ್ಯಾಂಕ್ ಎಟಿಎಂನಲ್ಲಿ ಘಟನೆ ನಡೆದಿದೆ. ಹಣ ತೆಗೆಯಲು ಎಟಿಎಂಗೆ ಬಂದವರು ಎಟಿಎಂ ಯಂತ್ರದ ಮೇಲೆ ಇದ್ದ ಹಾವನ್ನು ಕಂಡು ಬೆಚ್ಚಿದ್ದಾರೆ. ಕೊನೆಗೆ ಎಟಿಎಂ ಯಂತ್ರ ಸೇರಿಕೊಂಡಿದ್ದ ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...