alex Certify ಮೀನಿಗೆ ಆಹಾರ ನೀಡುತ್ತಿದ್ದವನು ಬಳಿಕ ಎದ್ನೋ ಬಿದ್ನೋ ಎಂದು ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನಿಗೆ ಆಹಾರ ನೀಡುತ್ತಿದ್ದವನು ಬಳಿಕ ಎದ್ನೋ ಬಿದ್ನೋ ಎಂದು ಪರಾರಿ

ಕೊಳದಲ್ಲಿನ ಮೀನುಗಳಿಗೆ ಕೈಯೊಡ್ಡಿ ಆಹಾರ ತಿನ್ನಿಸುತ್ತಿದ್ದ ವ್ಯಕ್ತಿಯೊಬ್ಬ ಹಾವು ಕಂಡು ಹೆದರಿ ಓಡಿದ್ದಾನೆ.

ಮೀನಿಗೆ ಆಹಾರ ಕೊಡುವುದನ್ನು ವಿಡಿಯೋ ಮಾಡುತ್ತಿದ್ದ ಆತ ಜಾಲತಾಣದಲ್ಲಿ ಇದನ್ನು ಹಂಚಿಕೊಂಡಿದ್ದಾನೆ.

ಕೊಳದೊಳಗಿನ ಮೀನುಗಳಿಗೆ ಕೈಯ್ಯಾರೆ ಆಹಾರ ತಿನ್ನಿಸುತ್ತಿದ್ದ. ಪುಟ್ಟ-ಪುಟ್ಟ ಮೀನುಗಳು ಈತನ ಕೈಯಲ್ಲಿರುವ ಆಹಾರವನ್ನು ಒಂದೊಂದಾಗಿಯೇ ಬಂದು ತಿಂದು ಹೋಗುತ್ತಿದ್ದವು.

ಅದನ್ನು ವಿಡಿಯೋ ಮಾಡುತ್ತಾ ಆತನೂ ಖುಷಿಪಡುತ್ತಿದ್ದ.‌ ಅದೇ ಖುಷಿಯಲ್ಲಿದ್ದ ಮೀನುಗಳ ನಡುವೆ ಕೊಳದೊಳಗೆ ಹಾವೊಂದು ಆತನ ಕೈ ಬಳಿಯೇ ಹಾದು ಹೋಗುತ್ತದೆ.

ಇದೂ ಯಾವುದೋ ಮೀನಿರಬೇಕು ಎಂದುಕೊಳ್ಳುವಷ್ಟರಲ್ಲಿ ತಾನು ನೋಡಿದ್ದು ಮೀನಲ್ಲ, ಹಾವು ಎಂಬುದು ಅರಿವಿಗೆ ಬರುತ್ತದೆ. ಅದನ್ನು ಕಂಡೊಡನೆ ಮನೆ ಬಾಗಿಲವರೆಗೆ ಎದ್ನೋ ಬಿದ್ನೋ ಎಂದು ಓಡುತ್ತಾನೆ. ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಅನೇಕರು ಹಲವು ರೀತಿಯ ಕಮೆಂಟ್ ಗಳನ್ನು ಮಾಡಿದ್ದು, ಹಾವುಗಳೂ ನಿರುಪದ್ರವಿ. ನಾವು ಏನು ಮಾಡದಿದ್ದರೆ, ಅವೂ ಏನು ಮಾಡುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...