ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಸಿಎಂ ಮಮತಾ ಬ್ಯಾನರ್ಜಿ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ದ್ವಿಚಕ್ರ ವಾಹನ ಚಲಾಯಿಸುವ ಮೂಲಕ ಬಿಜೆಪಿಯ ಪರಿವರ್ತನ್ ಯಾತ್ರೆಗೆ ರಂಗು ತುಂಬಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಮಮತಾ ಬ್ಯಾನರ್ಜಿ ಅವರು ಎಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಲು ಹೋಗಿ ಆಯ ತಪ್ಪಿದ್ದರು. ಪರಿವರ್ತನ್ ಯಾತ್ರೆಯಲ್ಲಿ ಪಾಲ್ಗೊಳ್ಳಲು ಸ್ಕೂಟರ್ ಏರಿ ಬಂದ ಸಚಿವೆ ಸ್ಮೃತಿ ಇರಾನಿ, ಕಾರ್ಯಕರ್ತರಲ್ಲಿ ನವಚೈತನ್ಯ ತಂದರು.
ಬಿಜೆಪಿಯ ಪರಿವರ್ತನ್ ಯಾತ್ರೆಯ ಮಾರ್ಗಕ್ಕೆ ಅನುಮತಿ ಕೊಡಲು ಸ್ಥಳೀಯ ಆಡಳಿತ ನಿರಾಕರಿಸಿತ್ತು. ಹೀಗಾಗಿ ಸ್ಕೂಟರ್ ಹಿಡಿದ ಸ್ಮೃತಿ, ರೂಪಾ ಗಂಗೂಲಿ, ಅಗ್ನಿಮಿತ್ರ ಪೌಲ್ ಸೇರಿದಂತೆ ಇನ್ನಿತರ ನಾಯಕರೊಂದಿಗೆ ಯಾತ್ರೆಯ ಕಡೆಗೆ ಹೊರಟರು.
ರಿಲಯನ್ಸ್ ಜಿಯೋ ಗ್ರಾಹಕರಿಗೆ ಬಂಪರ್ ಆಫರ್: ಮಾರ್ಚ್ 1 ರಿಂದ ವಿಶೇಷ ಪ್ಯಾಕೇಜ್ ಶುರು
ಇದನ್ನು ಕಂಡ ಕಾರ್ಯಕರ್ತರು ಪುಳಕಿತರಾದರಲ್ಲದೆ, ಜೈ ಶ್ರೀರಾಮ್ ಘೋಷಣೆಯೊಂದಿಗೆ ಹೆಜ್ಜೆ ಹಾಕಿದರು. ಸ್ಥಳೀಯ ಆಡಳಿತವು ಯಾತ್ರೆಯ ಮಾರ್ಗಕ್ಕೆ ಅನುಮತಿಸಿರಲಿಲ್ಲ. ಜನರನ್ನು ಸುಲಭವಾಗಿ ತಲುಪಲು ಸ್ಕೂಟರ್ ಹತ್ತಿದೆ. ನಾವು ದ್ವಿಚಕ್ರ ವಾಹನ ಓಡಿಸುತ್ತೇವೆ, ಕಾಲ್ನಡಿಗೆಯಲ್ಲಿ ತೆರಳಲೂ ಸಿದ್ಧರಿದ್ದೇವೆ. ಏಕೆಂದರೆ, ಪಶ್ಚಿಮ ಬಂಗಾಳವು ಬದಲಾವಣೆಯತ್ತೆ ಹೆಜ್ಜೆ ಹಾಕುತ್ತಿದೆ. ಬಿಜೆಪಿ ಬೆಂಬಲಿಸಿ, ಕಮಲ ಅರಳಿಸಿ ಎಂದು ಮತದಾರರಿಗೆ ಸ್ಮೃತಿ ಇರಾನಿ ಕರೆ ನೀಡಿದರು.
ಇದನ್ನು ಟೀಕಿಸಿರುವ ಟಿಎಂಸಿ ನಾಯಕ ಹಾಗೂ ಸಚಿವ ಫರೀದ್ ಹಕೀಮ್, ಅವರು ಪೆಟ್ರೋಲ್ ಗಾಡಿ ಓಡಿಸಿದ್ದು, ತೈಲ ಬೆಲೆ ಏರಿಕೆ ಬಗ್ಗೆ ಚಿಂತೆಯಿಲ್ಲ ಎಂಬುದನ್ನು ಇದು ತೋರುತ್ತದೆ ಎಂದಿದ್ದಾರೆ.