ಯಾವುದೇ ಪ್ರಚಲಿತ ಸವಾಲುಗಳನ್ನು ಎದುರಿಸಲು ಜನರಲ್ಲಿ ಜಾಗೃತಿ ಮೂಡಿಸಲು ಮುಂಬೈ ಪೊಲೀಸರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಬಹಳ ಕ್ರಿಯೇಟಿವ್ ಪೋಸ್ಟ್ಗಳನ್ನು ಹಾಕುವ ಮೂಲಕ ಬಹಳ ಫೇಮಸ್ ಆಗಿದ್ದಾರೆ.
ಇತ್ತೀಚೆಗೆ ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಮುಖದ ಮಾಸ್ಕ್ ಧರಿಸುವುದು ಅದೆಷ್ಟು ಮುಖ್ಯ ಎಂದು ಸಾರುವ ಮೆಮೆಯೊಂದನ್ನು ಮಾಡಿದ್ದ ಮುಂಬೈ ಪೊಲೀಸ್, ʼಅಂದಾಜ್ ಅಪ್ನಾ ಅಪ್ನಾʼ ಚಿತ್ರದ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ.
ಪರೇಶ್ ರಾವಲ್ ಇರುವ ಈ ಸೀನ್ನಲ್ಲಿ, “ತೇಜಾ ಮೈ ಹೂಂ, ಮಾರ್ಕ್ ಇಧರ್ ಹೈ,” ಎನ್ನುವ ಡೈಲಾಗ್ ಗೆ ಟ್ವಿಸ್ಟ್ ನೀಡಿ, “ತೇಜಾ ಮೈ ಹೂಂ, ಮಾಸ್ಕ ಇಧರ್ ಹೈ,” ಎಂದು ಬರೆದು, ಮೆಮೆ ಮೇಲೆ #MaskApnaApna ಎಂದು ಎಡಿಟ್ ಮಾಡಿದ್ದಾರೆ.
https://twitter.com/MumbaiPolice/status/1287953468548759555?ref_src=twsrc%5Etfw%7Ctwcamp%5Etweetembed%7Ctwterm%5E1287953468548759555%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fsmart-boy-mumbai-police-take-to-andaz-apna-apna-meme-to-spread-coronavirus-awareness-2739775.html