ಮಧ್ಯಪ್ರದೇಶದ ಜಾಬುವಾದ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಒಬ್ಬ ಮಹಿಳೆ, ವೃದ್ಧ ಮಹಿಳೆ ಎಳೆದೊಯ್ದು ಕೆಟ್ಟದಾಗಿ ಥಳಿಸುತ್ತಿರುವುದು ಕಂಡುಬರುತ್ತದೆ. ಸಂಜೆಯ ಹೊತ್ತಿಗೆ ಈ ವೈರಲ್ ವಿಡಿಯೋ ಪೊಲೀಸರಿಗೆ ತಲುಪಿದ್ದು ತನಿಖೆ ನಡೆಸುತ್ತಿದ್ದಾರೆ.
ಅತ್ತೆ, ಸೊಸೆಗೆ ಕೆಲಸ ಮಾಡುವಂತೆ ಹೇಳಿದ್ದಾಳಂತೆ. ಇದ್ರಿಂದ ಕೋಪಗೊಂಡ ಸೊಸೆ ಅತ್ತೆಗೆ ಥಳಿಸಿದ್ದಾಳೆ. ಮನೆಯಿಂದ ರಸ್ತೆಗೆ ಎಳೆತಂದು ಹೊಡೆದಿದ್ದಾಳೆ. ಇದನ್ನು ನೋಡಿದ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಪೊಲೀಸರು ಅತ್ತೆ ವಿಚಾರಣೆ ನಡೆಸಿದ್ದಾರೆ. ಆದ್ರೆ ಸೊಸೆ ಕಾಣೆಯಾಗಿದ್ದು, ಆಕೆ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.