ಇತ್ತೀಚಿಗಷ್ಟೇ ವಾರಣಾಸಿಗೆ ಭೇಟಿ ನೀಡಿದ್ದ ಟೀಂ ಇಂಡಿಯಾ ಆಟಗಾರ ಶಿಖರ್ ಧವನ್, ಬೋಟ್ನಲ್ಲಿ ವಿಹಾರ ಮಾಡುತ್ತಾ ಹಕ್ಕಿಗಳಿಗೆ ಧಾನ್ಯಗಳನ್ನ ತಿನ್ನಲು ನೀಡುತ್ತಿರುವ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಆದರೆ ಈ ಫೋಟೋ ಇದೀಗ ಅಂಬಿಗನಿಗೆ ಸಂಕಷ್ಟಕ್ಕೆ ಕಾರಣವಾಗಿದೆ.
ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಕಾಲ ಭೈರವ ದೇಗುಲಲ್ಲೆ ಭೇಟಿ ನೀಡಿದ್ದ ಶಿಖರ್ ಧವನ್, ಬಳಿಕ ಹಕ್ಕಿಗಳಿಗೆ ಉಣಬಡಿಸೋದ್ರಲ್ಲಿ ಸಂತೋಷವಿದೆ ಎಂದು ಶೀರ್ಷಿಕೆ ನೀಡಿ ಈ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.
ಈ ವಿಚಾರವಾಗಿ ಮಾತನಾಡಿದ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ, ಹಕ್ಕಿ ಜ್ವರ ದೇಶದಲ್ಲಿ ಉಲ್ಬಣಿಸುತ್ತಿರೋದ್ರ ಹಿನ್ನೆಲೆ ಎಲ್ಲಾ ಅಂಬಿಗರಿಗೆ ಒಂದಷ್ಟು ಮಾರ್ಗಸೂಚಿಗಳನ್ನ ನೀಡಿದ್ದೆವು. ಇದರಲ್ಲಿ ಯಾರೂ ಹಕ್ಕಿಗಳಿಗೆ ಏನನ್ನೂ ತಿನಿಸದಂತೆ ನೋಡಿಕೊಳ್ಳಿ ಅಂತಾನೂ ಸೂಚನೆ ನೀಡಿದ್ದೆವು. ಆದರೆ ಈ ನಿಯಮ ಉಲ್ಲಂಘಿಸಿದ ಬೋಟ್ಮ್ಯಾನ್ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಪ್ರವಾಸಿಗರಾಗಿ ಬಂದಿದ್ದ ಶಿಖರ್ ಧವನ್ ವಿರುದ್ಧ ಯಾವುದೇ ಕ್ರಮ ಜರುಗಿಸಲ್ಲ ಎಂದು ಹೇಳಿದ್ದಾರೆ.
ಹಕ್ಕಿ ಜ್ವರ ಉಲ್ಬಣ ಹಿನ್ನೆಲೆ ಯಾವುದೇ ಪ್ರವಾಸಿಗರು ಹಕ್ಕಿಗಳಿಗೆ ಜಲವಿಹಾರದ ವೇಳೆ ಏನನ್ನೂ ತಿನ್ನಿಸದಂತೆ ನೋಡಿಕೊಳ್ಳೋದು ಅಂಬಿಗರ ಜವಾಬ್ದಾರಿ ಎಂದು ಹೇಳಲಾಗಿದೆ. ಈ ನಿಯಮವನ್ನ ಉಲ್ಲಂಘಿಸಿದ ಅಂಬಿಗನಿಗೆ ಜಿಲ್ಲಾಡಳಿತದಿಂದ ನೋಟಿಸ್ ನೀಡಲಾಗುತ್ತೆ. ಹಾಗೂ ಆ ಅಂಬಿಗ ನನ್ನ ಲೈಸೆನ್ಸ್ ಯಾಕೆ ಕ್ಯಾನ್ಸಲ್ ಮಾಡಬಾರದು ಅನ್ನೋದಕ್ಕೆ ಸೂಕ್ತ ಉತ್ತರವನ್ನ ಸಲ್ಲಿಸಬೇಕಾಗುತ್ತೆ.
https://www.instagram.com/p/CKVzFwFASot/?utm_source=ig_web_copy_link