ಹಿಂದೂ ಮಹಿಳೆಯನ್ನ ಮುಸ್ಲಿಂ ಪತಿಯೊಂದಿಗೆ ಒಗ್ಗೂಡಿಸಿದ ಅಲಹಾಬಾದ್ ಹೈಕೋರ್ಟ್, ತನ್ನ ಜೀವನವನ್ನ ತನ್ನದೇ ಆದ ರೀತಿಯಲ್ಲಿ ಬದುಕಲು ಆಕೆಗೆ ಹಕ್ಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಡಿಸೆಂಬರ್ 18ರಂದು ನ್ಯಾಯಮೂರ್ತಿ ಪಂಕಜ್ ನಖ್ವಿ ಹಾಗೂ ವಿವೇಕ್ ಅಗರ್ವಾಲ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ತೀರ್ಪನ್ನ ನೀಡಿದೆ. ತನ್ನ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನ ನಾರಿ ನಿಕೇತನ ಹಾಗೂ ಮಕ್ಕಳ ಕಲ್ಯಾಣ ಸಮಿತಿ, ಆಕೆಯ ಪೋಷಕರೊಂದಿಗೆ ಬಲವಂತವಾಗಿ ಕಳುಹಿಸಿದೆ ಎಂದು ಮುಸ್ಲಿಂ ಪತಿ ಅರ್ಜಿ ಸಲ್ಲಿಸಿದ್ದರು.
ಹಿಂದೂ ಮಹಿಳೆ ಜೊತೆ ಮಾತುಕತೆ ನಡೆಸಿದ ನ್ಯಾಯಪೀಠ, ಆಕೆಗೆ ಪತಿಯ ಜೊತೆ ಇರೋಕೆ ಆಸೆ ಇರೋದನ್ನ ಗಮನಿಸಿದೆ. ಹೀಗಾಗಿ ಮೂರನೇ ವ್ಯಕ್ತಿಯ ಒತ್ತಡ ಹಾಗೂ ಅಡಚಣೆಗಳಿಗೆ ಬೆಲೆ ಕೊಡದೇ ತನ್ನ ರೀತಿಯಲ್ಲಿ ಜೀವನವನ್ನ ನಡೆಸಲು ಆಕೆ ಸ್ವತಂತ್ರಳು ಎಂದು ಹೇಳಿದೆ. ಈ ಮೂಲಕ ಮಹಿಳೆಯನ್ನ ಅಪಹರಣ ಮಾಡಿದ್ದಾನೆ ಎಂದು ಪತಿ ಮೇಲೆ ದಾಖಲು ಮಾಡಲಾಗಿದ್ದ ಎಫ್ಐಆರ್ನ್ನ ರದ್ದು ಮಾಡಿದೆ.