alex Certify ಈ ಕಾರಣಕ್ಕೆ ಮೊಬೈಲ್​ ಅಪ್ಲಿಕೇಶನ್​​ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಶಶಿ ತರೂರ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಮೊಬೈಲ್​ ಅಪ್ಲಿಕೇಶನ್​​ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಶಶಿ ತರೂರ್..​..!

ನಿರರ್ಗಳ ಇಂಗ್ಲೀಷ್​ ಅಂದಕೂಡಲೇ ಮೊದಲು ನೆನಪಾಗೋದೇ ಕಾಂಗ್ರೆಸ್​ ನಾಯಕ ಶಶಿ ತರೂರ್​. ಶಶಿ ತರೂರ್​ ಬಳಕೆ ಮಾಡುವ ಇಂಗ್ಲೀಷ್​ ಪದಗಳನ್ನ ಅರ್ಥ ಮಾಡಿಕೊಳ್ಳಬೇಕು ಅಂದರೆ ಒಮ್ಮೊಮ್ಮೆ ನಿಘಂಟುಗಳ ಮೊರೆ ಹೋಗದೇ ಬೇರೆ ದಾರೀನೇ ಇರೋದಿಲ್ಲ.

ಆದರೆ ಇತ್ತೀಚಿಗೆ ಇಂಗ್ಲಿಷ್​ ಕಲಿಸುತ್ತೇನೆಂದು ಹೇಳಿಕೊಂಡಿದ್ದ ಮೊಬೈಲ್​ ಅಪ್ಲಿಕೇಶನ್​ ಒಂದು ಅನುಮತಿ ಕೇಳದೆಯೇ ತನ್ನ ಅಪ್ಲಿಕೇಶನ್​ನ ಪ್ರೊಮೋಷನ್​ಗೆ ಶಶಿ ತರೂರ್​ರ ಹೆಸರನ್ನ ಬಳಕೆ ಮಾಡಿಕೊಂಡು ಪೇಚಿಗೆ ಸಿಲುಕಿದೆ. ಶಶಿ ತರೂರ್​ರಂತೆ ನಿರರ್ಗಳ ಇಂಗ್ಲೀಷ್​ ಮಾತನಾಡಲು ತಮ್ಮ ಈ ಅಪ್ಲಿಕೇಶನ್​ ಬಳಕೆ ಮಾಡಿ ಎಂದು ಅದು ಹೇಳಿಕೊಂಡಿತ್ತು.

ಮೊಬೈಲ್​ ಅಪ್ಲಿಕೇಶನ್​​ನ ಈ ಉದ್ಧಟತನದ ಸಂಬಂಧ ಟ್ವಿಟರ್​ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್​, ಈ ರೀತಿಯ ಸುಳ್ಳು ಆಮಿಷಗಳ ಮೂಲಕ ಈ ಮೊಬೈಲ್​ ಅಪ್ಲಿಕೇಶನ್ ವಿದ್ಯಾರ್ಥಿಗಳನ್ನ ತಪ್ಪು ದಾರಿಗೆ ಎಳೆದಿದೆ ಅನ್ನೋದು ನನ್ನ ಗಮನಕ್ಕೆ ಬಂದಿದೆ. ಈ ಅಪ್ಲಿಕೇಶನ್​ಗೂ ನನಗೂ ಯಾವುದೇ ಸಂಬಂಧವಿಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ನನ್ನ ಹೆಸರು ಹಾಗೂ ಫೋಟೋವನ್ನ ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ನಾನು ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

— Shashi Tharoor (@ShashiTharoor) March 22, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...